ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಡಿ. 22 ರಂದು ಬಿದ್ದು ಸಿಕ್ಕಿದ ಚಿನ್ನದ ಚೈನ್ ನ್ನು ಪ್ರಾಮಾಣಿಕತೆಯಿಂದ ಹಿಂತಿರುಗಿಸಿದ ಘಟನೆ ವರದಿಯಾಗಿದೆ.
ಅರಂತೋಡಿನ ಉಳುವಾರು ಪ್ರಪುಲ್ ಎಂಬ ಕಬಡ್ಡಿ ಆಟಗಾರ ಕಬ್ಬಡ್ಡಿ ಪಂದ್ಯಾಟಕ್ಕ್ಜೆ ಬಂದಿದ್ದು ಎರಡೂವರೆ ಪವನ್ ಚಿನ್ನದ ಸರ ಬಿದ್ದು ಹೋಗಿದ್ದು, ಆ ಚಿನ್ನದ ಸರ ಅದೇ ದಿನ ದೇವಿಸಿಟಿ ಕಾಂಪ್ಲೆಕ್ಸ್ ಮಾಲಕರಾದ ದೇವಿಪ್ರಸಾದ್ ಚಿಕ್ಮುಳಿ ಇವರ ತಂದೆ ದೊಡ್ಡಣ್ಣ ಗೌಡ ಚಿಕ್ಮುಳಿ ಇವರಿಗೆ ಬಿದ್ದು ಸಿಕ್ಕಿರುತ್ತದೆ.
ಅದನ್ನು ಪ್ರಾಮಾಣಿಕತೆಯಿಂದ ಪಂದ್ಯಾಟದಲ್ಲಿ ಆಡಲು ಬಂದಿದ್ದ ಪ್ರಪುಲ್ ಇವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.