ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಉತ್ಸವಗಳು ನಡೆಯುತ್ತಿದ್ದು ನ. 30ರಂದು ಲಕ್ಷ ದೀಪೋತ್ಸವ ಬಳಿಕ ಬೀದಿ ಉರುಳು ಸೇವೆ ಆರಂಭಗೊಂಡಿದೆ.
ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಬೀದಿಯಲ್ಲಿ ಉರುಳುತ್ತಾ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ನಮಿಸಿ ದರ್ಪಣ ತೀರ್ಥ ನದಿಯಲ್ಲಿ ತೀರ್ಥ ಸ್ನಾನ ಮಾಡಲಾಗುತ್ತದೆ. ಡಿ.7 ರ ಮಹಾ ರಥೋತ್ಸವದ ವರೆಗೆ ಬಿದಿ ಉರುಳು ಸೇವೆ ನೆರವೇರಿಸಲು ಅವಕಾಶವಿದೆ.