ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ತುಮಕೂರು ಜಿಲ್ಲಾ ಸಂಸ್ಥೆ ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆಯು ಡಿ.1ರಂದು ತುಮಕೂರಿನ ಸೆಂಟ್ ಮೇರಿಸ್ ಶಾಲಾ ಆವರಣದಲ್ಲಿ ನಡೆಯಿತು.
ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಬ್ ವಿಭಾಗವು ಪ್ರಥಮ ಸ್ಥಾನ ಪಡೆದು ನಗದು ಹಣ ಹಾಗೂ ಪ್ರಶಸ್ತಿ ಫಲಕವನ್ನು ಪಡೆದುಕೊಂಡಿದೆ.
ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಆಶಯ್ ಜಿ.ಸಿ. ಸುಳ್ಯ, ಕೃತಿಕ್ ಕೆ. ಕುತ್ಯಾಡಿ, ಲಕ್ಷಯ್ ಬಿ.ಜಿ. ಬೆಳ್ಳಿಪ್ಪಾಡಿ, ಪೂಜಿತ್ ಮಹಾಬಲಡ್ಕ, ಆಶೀತ್ ಡಿ.ಎನ್. ದೇವರಗುಂಡ, ಕಾರ್ತಿಕ್ ವಿ. ವಿನೋಬನಗರ ಭಾಗವಹಿಸಿದ್ದರು.
ವಿದ್ಯಾಸಂಸ್ಥೆಯ ಕಬ್ ಮಾಸ್ಟರ್ ಶ್ರೀಮತಿ ಉಷಾ, ಬುಲ್ ಬುಲ್ ಕ್ಯಾಪ್ಟನ್ ಶ್ರೀಮತಿ ಪ್ರಜ್ಞಾ, ಸ್ಕೌಟ್ ಮಾಸ್ಟರ್ ಲೀಲಾವತಿ, ಗೈಡ್ ಕ್ಯಾಪ್ಟನ್ ಶ್ರೀಮತಿ ಪೂರ್ಣಿಮಾ ಕಾರಿಂಜ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.