ಕೊಡಗು ಸಂಪಾಜೆ ಸ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸಾವಿತ್ರಿ ನಿವೃತ್ತಿ – ಬೀಳ್ಕೊಡುಗೆ

0

ಕೊಡಗು ಸಂಪಾಜೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 25 ವರ್ಷಗಳ ಕಾಲ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ , ಮೂರು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸಾವಿತ್ರಿ ಪಿ.ಎ. ಅವರು ನ.30ರಂದು
ನಿವೃತ್ತಿ ಹೊಂದಿದ್ದಾರೆ.

ಸಾವಿತ್ರಿ ಪಿ. ಎ ಅವರು ಪಟ್ಟದ ದಿವಂಗತ ಪಯ್ಯಣ್ಣ ಮತ್ತು ನೀಲಾವತಿ ದಂಪತಿಯ ಪುತ್ರಿಯಾಗಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಡಗಿನ ಮದೆನಾಡು ಗ್ರಾಮದ ಗೋಳಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಹಾಗೂ ಪ್ರೌಢ ಶಿಕ್ಷಣವನ್ನು ಬೆಟಗೇರಿಯ ಉದಯ ಪ್ರೌಢಶಾಲೆಯಲ್ಲಿ ಪೂರೈಸಿದರು.

1987ರಲ್ಲಿ ವೃತ್ತಿಪರ ಶಿಕ್ಷಣ ಪೂರೈಸಿ 1992ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದ ಶ್ರೀಮತಿ ಸಾವಿತ್ರಿಯವರು ಕೊಡಗಿನ ಚಪ್ಪೆಡಂಡ ಸ.ಕಿ. ಪ್ರಾ. ಶಾಲೆಯಲ್ಲಿ ನಾಲ್ಕು ವರ್ಷ ಕರ್ತವ್ಯ ನಿರ್ವಹಿಸಿ, ಬಳಿಕ ಸಂಪಾಜೆಯ ಸ. ಮಾ. ಹಿ. ಪ್ರಾ. ಶಾಲೆಗೆ ವರ್ಗಾವಣೆಗೊಂಡರು.

ಸಂಪಾಜೆಯಲ್ಲಿ ಕಳೆದ 25 ವರ್ಷ ಗಳ ಕಾಲ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ , ಕಳೆದ ಮೂರು ವರ್ಷಗಳಿಂದ ಶಾಲಾ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ, ನ.30ರಂದು ನಿವೃತ್ತಿ ಹೊಂದಿದ್ದಾರೆ.


ಇವರು ಪತಿ ಮುದ್ಯನ ಚಂದ್ರಶೇಖರ ಮಗ, ಸೊಸೆ, ಹಾಗೂ ಮಕ್ಕಳೊಂದಿಗೆ ಮದೆನಾಡಿನಲ್ಲಿ ನೆಲೆಸಿದ್ದಾರೆ.
ಶ್ರೀಮತಿ ಸಾವಿತ್ರಿ ಅವರಿಗೆ ಶಾಲಾ ವತಿಯಿಂದ ಬೀಳ್ಕೊಡುಗೆ ಸಮಾರಂಭವು ‌ನ.30ರಂದು ನಡೆದಿದ್ದು, ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಶ್ರೀಧರ ಪಡ್ಪು , ಸೇರಿದಂತೆ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.