ಮೈಸೂರಿನ ಎನ್ .ವಿ.ಎಸ್. ಕ್ರಿಯೇಷನ್ಸ್ ನ್ಯಾಚುರಲ್ ವ್ಯಾಲ್ಯೂಬಲ್ ಸಪೋರ್ಟ್ ನ ಒಂಭತ್ತನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ರಾಜ್ಯಮಟ್ಟದ ಜ್ಯೂನಿಯರ್ ವಿಭಾಗದ ಡ್ಯಾನ್ ಸ್ಪರ್ಧೆಯಲ್ಲಿ ಸೋನಾ ಅಡ್ಕಾರು ಚಾಂಪಿಯನ್ ಆಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಈಕೆ ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಅಡ್ಕಾರು ಮತ್ತು ಶ್ರೀಮತಿ ಶೋಭಾ ದಂಪತಿಯ ಪುತ್ರಿಯಾಗಿದ್ದು, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ. ಈಕೆಗೆ ಸಂತೋಷ್ ಮಂಗಳೂರು ಅವರು ನೃತ್ಯ ತರಬೇತಿ ನೀಡಿದ್ದಾರೆ.