ಅನ್ಸಾರಿಯಾ ಅಡಿಟೋರಿಯಂ ಉದ್ಘಾಟನೆ : ಮೂರು ಸಂಘ ಸಂಸ್ಥೆಗಳಿಗೆ ಗೌರವರ್ಪಣೆ

0

ಅನ್ಸಾರಿಯಾ ಗಲ್ಫ್ ಅಡಿಟೋರಿಯಂ ಉದ್ಘಾಟನೆ ಸಂದರ್ಭದಲ್ಲಿ ಅಡಿಟೋರಿಯಂ ನಿರ್ಮಾಣಕ್ಕಾಗಿ ಧನಸಹಾಯ ನೀಡಿದ ಮೂರು ಸಂಘ ಸಂಸ್ಥೆಗಳಾದ ಸುಳ್ಯದ ಗಾಂಧಿನಗರದಲ್ಲಿ ಕಳೆದ ಐವತ್ತು ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿರುವ ಸಂಸ್ಥ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್, ಕಳೆದ ವರ್ಷ ತನ್ನ ನಲವತ್ತು ವರ್ಷ ಪೊರೈಸಿ ನಲವತ್ತು ವರ್ಷಗಳ ಸವಿನೆನಪಿಗಾಗಿ ನಲವತ್ತು ಸಾಮಾಜಿಕ ಚಟುವಟಿಕೆಗಳನ್ನು ಮಾಡಿದ ಸಂಸ್ಥೆ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಎಲಿಮಲೆ ಹಾಗೂ ಸಾಮಾಜಿಕ ಜಾಲತಾಣ ವಾಟ್ಸಪ್ ಗ್ರೂಪ್ (ಕೆಎ 21) ಇದರ ಮೂಲಕ ಹಣವನ್ನು ಕ್ರೋಡೀಕರಿಸಿ ಅಡಿಟೋರಿಯಂ ನಿರ್ಮಾಣಕ್ಕೆ ಸಹಾಯ ಮಾಡಿದ ವಾಟ್ಸ್ ಆಪ್ ಗ್ರೂಪ್ ಬಳಗವನ್ನು ಗುರುತಿಸಿ ಗೌರವಿಸಲಾಯಿತು.


ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ನುಸ್ರತ್ ಅಧ್ಯಕ್ಷ ಅಬ್ದುಲ್‌ ಲತೀಫ್ ಹರ್ಲಡ್ಕ, ಪ್ರಧಾನ ಕಾರ್ಯದರ್ಶಿ ಸೂಪಿ ಎಲಿಮಲೆ, ಸದಸ್ಯರಾದ ಬಾತಿಶ,ಮತ್ತು ಕೆಎ 21 ವಾಟ್ಸ್ ಆಪ್ ಗ್ರೂಪ್ ನ ಪೈಝಲ್ ಕಟ್ಟೆಕ್ಕಾರ್ ಅವರು ಗೌರವವನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಎಜಿಸಿಸಿ ಉಪಾಧ್ಯಕ್ಷ ಮುನೀರ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿ ಸಲೀಂ ಇಸ್ಮಾಯಿಲ್,ಸದಸ್ಯರಾದ ಲತೀಫ್ ಕುತ್ತಮೊಟ್ಟೆ,ಇಕ್ಬಾಲ್ ಕನಕಮಜಲು ಮೊದಲಾದವರು ಉಪಸ್ಥಿತರಿದ್ದರು.