ಸುಳ್ಯ ತಮಿಳು ರಿಪಾರ್ಟಿಯರ್ಸ್ ಯುನಿಟೆಡ್ ಸೇವಾ ಟ್ರಸ್ಟ್ ವತಿಯಿಂದ ಚೆಕ್ ವಿತರಣೆ

0

ಅಧಿಕ ರಕ್ತದೊತ್ತಡದಿಂದ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮರ ಮುಡ್ನೂರು ಗ್ರಾಮದ ಕೂಟೇಲು ನಿವಾಸಿ ರಾಜನ್ ಅವರ ಚಿಕಿತ್ಸೆಗೆ ಸಂಗ್ರಹವಾದ (33,580/-ರೂ) ಮೊತ್ತದ ಚೆಕ್ ನ್ನು ಡಿ.1 ರಂದು ಅವರ ಮನೆಯವರಿಗೆ ತಮಿಳು ರಿಪಾರ್ಟಿಯರ್ಸ್ ಯುನಿಟೆಡ್ ಸೇವಾ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷರಾದ ಪುವೇಂದ್ರನ್ ಕೂಟೇಲು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರ.ಕಾರ್ಯದರ್ಶಿಯಾದ ವಿಜಯ ಕುಮಾರ್ ನಾಗ ಪಟ್ಟಣ ಹಾಗೂ ಸದಸ್ಯರಾದ ಶ್ರೀಮತಿ ನಿರ್ಮಲಾ ಉಪಸ್ಥಿತರಿದ್ದರು.