ಸಾರ್ವಜನಿಕ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ
ಜಾಲ್ಸೂರು ಗ್ರಾಮದ ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರ ಇಲ್ಲಿ ಪ್ರಶ್ನಾರೂಢ ರಾಶಿ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ಕ್ಷೇತ್ರಾಭಿವೃದ್ಧಿಗಾಗಿ ವೇ.ಮೂ.ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಇವರ ನೇತೃತ್ವದಲ್ಲಿ ಅಹಃಪೂರ್ಣ ಭಜನಾ ಸೇವೆ ಹಾಗೂ ಸಾರ್ವಜನಿಕ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಡಿ.15ರಂದು ನಡೆಯಲಿದೆ.
ಬೆಳಗ್ಗೆ ಶ್ರೀ ಮಹಾಗಣಪತಿ ಹವನ, ಶ್ರೀ ಮಹಾಗಣಪತಿ ಹವನ ಪೂರ್ಣಾಹುತಿ, ಭಜನಾ ಸೇವೆ , ಮಹಾಪೂಜೆ, ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ.
ಬಳಿಕ ಸಂಜೆ ಗಂಟೆ ೭.೦೦ ರಿಂದ ಸೋಣಂಗೇರಿ ವೃತ್ತದಿಂದ ಮಂದಿರದವರೆಗೆ ಪೂರ್ಣಕುಂಭ ಸ್ವಾಗತ ಹಾಗೂ ಕುಣಿತ ಭಜನೆಯೊಂದಿಗೆ ಮೆರವಣೆ, ಶ್ರೀ ಸತ್ಯನಾರಾಯಣ ಪೂಜಾ ಮಹಾಮಂಗಳಾರತಿ, ಸಭಾ ಕಾರ್ಯಕ್ರಮ ನಡೆಯಲಿದೆ.
ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳರವರು, ಶ್ರೀ ಮಧ್ ಶಂಕರಾಚಾರ್ಯ ತೋಟಕಾಚಾರ್ಯ, ಶ್ರೀ ಎಡನಿರು ಮಠರವರು ಆಗಮಿಸಿ ಆಶೀವರ್ಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯರ್‌ಹಿತ್ಲು ವಹಿಸಲಿದ್ದಾರೆ.
ಭಗವದ್ಗೀತೆ ಪ್ರವಚನಕಾರರಾದ ವಿದ್ವಾನ್ ಕಿರಣ್ ಕುಮಾರ್ ಪಡುಪಣಂಬೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಹಾಗೂ ರಮೇಶ್ ನಾಯಕ್ ಉಪಸ್ಥಿತರಿರುವರು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.