ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇದರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ, ಪ್ರೆಸ್ ಕ್ಲಬ್ ಸುಳ್ಯ ಮತ್ತು ಯುವಕ ಮಂಡಲ ಕಳಂಜ ಇದರ ಸಹಯೋಗದೊಂದಿಗೆ ಡಾ.ಪುರುಷೋತ್ತಮ ಬಿಳಿಮಲೆಯವರ ಕೃತಿ ‘ಹುಡುಕಾಟ’ದ ಅನಾವರಣ ಮತ್ತು ಸುಳ್ಯ ತಾಲೂಕಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ನೆಲೆಗಟ್ಟಿನ ಕುರಿತು ಹಿರಿಯರಾದ ಕವಿ ಸುಬ್ರಾಯ ಚೊಕ್ಕಾಡಿ ಹಾಗೂ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ.ಬಿಳಿಮಲೆಯವರೊಂದಿಗೆ ಸಂವಾದ ಕಾರ್ಯಕ್ರಮವು ಡಿ. 7 ಶನಿವಾರದಂದು ಸಂಜೆ 3 ಗಂಟೆಯಿಂದ ನಿನಾದ ತಂಟೆಪ್ಪಾಡಿಯ ಪರಿಸರದಲ್ಲಿ ನಡೆಯಲಿರುವುದು.
ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಪಿ. ಐತಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಚಿರಂತ್ ಪ್ರಕಾಶನದ ಪರಮೇಶ್ವರ ಎಚ್. ಉಪಸ್ಥಿತರಿರಲಿದ್ದಾರೆ ಎಂದು ಸಂಚಾಲಕ ವಸಂತ್ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.