ಚೆಂಬು ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ

0

ಚೆಂಬು ಗ್ರಾಮದ ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವವು ಡಿ.5ರಂದು ನಡೆಯಿತು.

ಡಿ.2ರಂದು ಬೆಳಿಗ್ಗೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭಂಡಾರಕ್ಕೆ ಹೋಗಿ ಡಿ.3ರಂದು ಭಾಗಮಂಡಲದಿಂದ ಭಂಡಾರ ತಂದು ರಾತ್ರಿ ಹಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡಲಾಯಿತು. ಪ್ರಾತ:ಕಾಲ ನೇಮೋತ್ಸವ ಜರುಗಿತು.
ಡಿ.4ರಂದು ಎಡೆಕಡಪು, ಡಿ.5ರಂದು ಪ್ರಾತ:ಕಾಲ ಕಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಟ್ಟು , ಬೆಳಿಗ್ಗೆ ಉಳ್ಳಾಕುಲು ಕುದುರೆಬಂಡಿ ಎಳೆಯಲಾಯಿತು. ಪೂರ್ವಾಹ್ನ ಉಳ್ಳಾಕುಲು ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಅಪರಾಹ್ನ ಪರಿವಾರ ದೈವಗಳ ನಡಾವಳಿ ನಡೆಯಲಿದೆ.

ಈ ಸಂದರ್ಭದಲ್ಲಿ ಊರ ಭಕ್ತಾದಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.