ಜೇಸಿಐ ಪಂಜ ಪಂಚಶ್ರೀ : 2025ನೇ ಸಾಲಿನ ನೂತನ ಪದಾಧಿಕಾರಿಗಳು ಅಧ್ಯಕ್ಷ- ಜೇಸಿ ವಾಚಣ್ಣ ಕೆರೆಮೂಲೆ,ಕಾರ್ಯದರ್ಶಿ- ಜೇಸಿ ಅಶ್ವಥ್ ಬಾಬ್ಲುಬೆಟ್ಟು, ಖಜಾಂಜಿ- ಜೇಸಿ ಗಗನ್ ಕಿನ್ನಿಕುಮೇರಿ

0

ಜೇಸಿಐ ಪಂಜ ಪಂಚಶ್ರೀ ಇದರ 2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಡಿ.4 ರಂದು ಪಂಜ ಲಯನ್ಸ್ ಸಭಾಭವನದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಜೇಸಿ ವಾಚಣ್ಣ ಕೆರೆಮೂಲೆ,ಉಪಾಧ್ಯಕ್ಷರಾಗಿ ಜೇಸಿ ದೇವಿಪ್ರಸಾದ್ ಚಿಕ್ಮುಳಿ,
ಜೇಸಿ ಕೌಶಿಕ್ ಕುಳ, ಜೇಸಿ ಪ್ರವೀಣ್ ಕಾಯರ, ಜೇಸಿ ಜೀವನ್ ಶೆಟ್ಟಿಗದ್ದೆ, ಜೇಸಿ ಕುಸುಮಾಧರ ಕಕ್ಯಾನ, ಕಾರ್ಯದರ್ಶಿಯಾಗಿ ಜೇಸಿ ಅಶ್ವಥ್ ಬಾಬ್ಲುಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಜೇಸಿ ಪ್ರಕಾಶ್ ಅಳ್ಪೆ, ಖಜಾಂಜಿಯಾಗಿ ಜೇಸಿ ಗಗನ್ ಕಿನ್ನಿಕುಮೇರಿ ಆಯ್ಕೆಗೊಂಡರು.


ನಿರ್ದೇಶಕರಾಗಿ ಜೇಸಿ ವಿಜೇಶ್ ಹಿರಿಯಡ್ಕ, ಜೇಸಿ ಪ್ರವೀಣ್ ಕುಂಜತ್ತಾಡಿ, ಜೇಸಿ ಚರಣ್ ದೇರಪ್ಪಜ್ಜನಮನೆ, ಜೇಸಿ ಶ್ರೇಯಸ್ಸ್ ತುಪ್ಪದಮನೆ, ಜೇಸಿ ಕಿರಣ್ ಕಂರ್ಬುನೆಕ್ಕಿಲ, ಜೇಸಿ ಪುನೀತ್ ಮೂಲೆಮನೆ, ಜೇಸಿ ಮದನ್ ಕೊಲ್ಯ, ಜೇಸಿ ಪವನ್ ಮೂಲೆಮನೆ, ಜೇಸಿ ಡಾ.ಪ್ರಜ್ವಲ್ ಮುಂಡೋಡಿ, ಜೇಸಿ ಷಣ್ಮುಖ ಕಟ್ಟ, ಜೇಸಿ ಅಶೋಕ್ ಕುಮಾರ್ ದಿಡುಪೆ, ಜೇಸಿ ಕಾರ್ತಿಕ್ ಐ.ಬಿ., ಜೇಸಿ ಕಾರ್ತಿಕ್ ಕಣ್ಕಲ್, ಜೇಸಿ ಸುರೇಶ್ ಚಿದ್ಗಲ್ಲು, ಜೇಸಿ ಸುಬ್ರಹ್ಮಣ್ಯ ಕುದ್ಪಾಜೆ ಆಯ್ಕೆಯಾದರು.


ಕಾರ್ಯಕ್ರಮದಲ್ಲಿ ಚುನಾವಣಾ ಅಧಿಕಾರಿಯಾಗಿ ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ, ವಲಯಯಾಧಿಕಾರಿ ಜೇಸಿ ಲೋಕೇಶ್ ಆಕ್ರಿಕಟ್ಟೆ ಪಾಲ್ಗೊಂಡಿದ್ದರು. ಸ್ಥಾಪಕಾಧ್ಯಕ್ಷ ಜೇಸಿ ದೇವಿಪ್ರಸಾದ್ ಜಾಕೆ ಎಲ್ಲಾ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.