ಲಯನ್ಸ್ ಜಾಗತಿಕ ಮಟ್ಟದ ಪೀಸ್ ಪೋಸ್ಟರ್ ಸ್ಪರ್ಧೆಯಲ್ಲಿ ಕುಶಿತ್ ಮಲ್ಲಾರ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0


ವಿಶ್ವಶಾಂತಿಯನ್ನು ಪ್ರತಿಬಿಂಭಿಸುವ ಜಾಗತಿಕ ಮಟ್ಟದ ಪೀಸ್ ಪೋಸ್ಟರ್ ಸ್ಪರ್ಧೆಯಲ್ಲಿ ಪಂಜ ಲಯನ್ಸ್ ಕ್ಲಬ್‌ನ್ನು ಪ್ರತಿನಿಧಿಸಿದ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇದರ 6 ನೇ ತರಗತಿ ವಿದ್ಯಾರ್ಥಿ ಕುಶಿತ್ ಮಲ್ಲಾರ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.


ಲಯನ್ಸ್ ಜಿಲ್ಲೆ 317 ಡಿಯಲ್ಲಿ ಪ್ರಥಮ ಸ್ಥಾನಿಯಾಗಿ ಮುಂದೆ ಲಯನ್ಸ್ ಮಲ್ಟಿಪಲ್ ಜಿಲ್ಲೆಗೆ ಆಯ್ಕೆಗೊಂಡು ಅಲ್ಲಿಯೂ ಪ್ರಥಮ ಸ್ಥಾನ ಪಡೆದು ಇದೀಗ ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅಪೂರ್ವ ಅವಕಾಶ ಈತನಿಗೆ ಲಭಿಸಿದೆ. ಏನೆಕಲ್ಲಿನ ಮಲ್ಲಾರ ಲಿಂಗಪ್ಪ ಗೌಡ ಮತ್ತು ಭವ್ಯ ದಂಪತಿಗಳ ಪುತ್ರನಾಗಿರುವ ಈತ ಈಗಾಗಲೇ ಚಿತ್ರಕಲೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾನೆ. ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕರಾದ ಸತೀಶ್ ಪಂಜ ಈತನಿಗೆ ಮಾರ್ಗದರ್ಶನ ನೀಡಿದ್ದಾರೆ.