ಡಿ.16ರಿಂದ ಜ‌.14ರವರೆಗೆ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನುಪೂಜೆ

0

ಧನುಪೂಜೆ ಪ್ರಯುಕ್ತ ಭಕ್ತಾದಿಗಳ ಪೂರ್ವಭಾವಿ ಸಭೆ

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಡಿ.16ರ ಧನುರ್ಮಾಸದ ಸಂಕ್ರಮಣದಿಂದ ಜ.14ರ ಮಕರ ಸಂಕ್ರಮಣದ ತನಕ ಧನುಪೂಜೆ ಜರುಗಲಿದ್ದು, ಈ ಕುರಿತು ಭಕ್ತಾದಿಗಳ ಪೂರ್ವಭಾವಿ ಸಭೆಯು ಡಿ.7ರಂದು ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ಜರುಗಿತು.

ಡಿ.16ರ ಧನುಸಂಕ್ರಮಣದಿಂದ ಜ.14ರ ಮಕರ ಸಂಕ್ರಮಣದ ತನಕ ಪ್ರತಿದಿನ ಪ್ರಾತ:ಕಾಲ 5 ಗಂಟೆಗೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀವರ ಭಟ್ ಪಾಂಗಣ್ಣಾಯರ ನೇತೃತ್ವದಲ್ಲಿ ಧನುಪೂಜೆ ಜರುಗಲಿದೆ.

ವೇದಿಕೆಯಲ್ಲಿ ದೇವಸ್ಥಾನದ ಸಂಚಾಲಕ ನ. ಸೀತಾರಾಮ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಧಾಕರ ಕಾಮತ್, ದೇವಸ್ಥಾನದ ವತಿಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನ ಹಾಗೂ ಕಳರಿ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮೋಹನ ನಂಗಾರು, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ರಜತ್ ಅಡ್ಕಾರು, ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಉಪಸ್ಥಿತರಿದ್ದರು.

ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನದ ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.