ಬೆಳ್ತಂಗಡಿ ತಾಲೂಕಿನ ಹೋಲಿ ರೆಡಿಮೇರ್ ವಿದ್ಯಾಸಂಸ್ಥೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿರಿಯ ವಿಭಾಗದ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ತೊಡಿಕಾನ ಶಾಲೆಯ ವಿದ್ಯಾರ್ಥಿನಿ ತುಷಿತ ಕೆ ಎನ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ತೊಡಿಕಾನ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದು ತೊಡಿಕಾನ ಗ್ರಾಮದ ಚಾಂಬಾಡು ನಾಗರಾಜ್ ಕೊರತ್ತೋಡಿ ಮತ್ತು ಶ್ರೀಮತಿ ದಿವ್ಯ ದಂಪತಿಗಳ ಪುತ್ರಿ.