ಎಡಮಂಗಲದ ಜಾಲ್ತಾರು ಬಸ್‌ಸ್ಟ್ಯಾಂಡ್‌ನಲ್ಲಿ ನೂತನ ಸಂಜೀವಿನಿ ಸಂಘವನ್ನು ಇತ್ತೀಚೆಗೆ ಉದ್ಘಾಟನೆ ಮಾಡಲಾಯಿತು.
೧೦ ಜನ ಸದಸ್ಯರು ಸಂಘಕ್ಕೆ ಸೇರ್ಪಡೆಗೊಂಡರು.
ಹಿರಿಯರಾದ ಶ್ರೀಮತಿ ಗಿರಿಜಾ, ಶ್ರೀಮತಿ ಲೋಕೇಶ್ವರಿ, ಶ್ರೀಮತಿ ನಳಿನಿ ದೀಪ ಬೆಳಗಿಸುವ ಮೂಲಕ ಸಂಘವನ್ನು ಉದ್ಘಾಟಿಸಿದರು. ಎಂಬಿಕೆ ಭವ್ಯ ಸ್ವಾಗತಿಸಿದರು. ಸದಸ್ಯರು ಸಂಘಕ್ಕೆ ಇಷ್ಟದೇವತೆ ಸಂಜೀವಿನಿ ಎಂದು ಹೆಸರನ್ನು ಸೂಚಿಸಿದರು. ಅಧ್ಯಕ್ಷರಾಗಿ ರಮ್ಯಾ, ಕಾರ್ಯದರ್ಶಿಯಾಗಿ ಪ್ರತಿಭಾರವರನ್ನು ಆಯ್ಕೆ ಮಾಡಲಾಯಿತು. ತಿಂಗಳಿಗೊಮ್ಮೆ ಉಳಿತಾಯ ಮಾಡುವುದೆಂದು ನಿರ್ಧಾರಿಸಲಾಯಿತು. ಸಾವಿತ್ರಿ ವಂದಿಸಿದರು.