ಇತ್ತೀಚಿಗೆ ನಿಧನರಾದ ದಿ. ಕೆ.ಎನ್ ರಾಘವ ಆಚಾರ್ಯ ಅಡ್ಕಾರುರವರ ವಿಶ್ವಕರ್ಮ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ ಡಿ. 9 ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕರುಗಳಾದ
ವೈ.ಎ ಆನಂದ, ಸೀತಾರಾಮ ಎಂ.ಕೆ ಹಾಗೂ ದಿ. ರಾಘವ ಆಚಾರ್ಯರ ಮಗಳು ಶ್ರೀಮತಿ ರೇಖಾರವರ ಸ್ನೇಹಿತೆ ಶ್ರೀಮತಿ ಜೇಸಿಲ್ಲಾ ರವರು ಮೃತರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿ. ರಾಘವ ಆಚಾರ್ಯರವರ ಪತ್ನಿ ಶ್ರೀಮತಿ ಸಾವಿತ್ರಿ ಆಚಾರ್ಯ, ಪುತ್ರರಾದ ಸತೀಶ್ ಆಚಾರ್ಯ, ಶಿವಪ್ರಸಾದ್ ಆಚಾರ್ಯ, ಮಗಳು ಶ್ರೀಮತಿ ರೇಖಾ, ಸೊಸೆ ಶ್ರೀಮತಿ ಸ್ವಾತಿ, ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.
ಅಳಿಯ ಭರತ್ ರಾಜ್ ಬೈಕಾಡಿ ಕಾರ್ಯಕ್ರಮ ನಿರ್ವಹಿಸಿದರು.