ಬುಡೋಕಾನ್ ಕರಾಟೆ – ಡು ಇಂಟರ್ನ್ಯಾಷನಲ್ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಅಭಿನವ್ ಮುಂಡೋಳಿಮೂಲೆಯವರು ಎರಡು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಎಲಾಯಿಡ್ ಆರ್ಟ್ ಎಕ್ಕೂರು ಆಶ್ರಯದಲ್ಲಿ ನಡೆದ
8ರಿಂದ 9 ವರ್ಷ ವಯೋಮಾನದ ಹುಡುಗರ ವೈಯಕ್ತಿಕ ಕಾಟ ಆರೆಂಜ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು 25-30 ಕೆಜಿ ವಿಭಾಗದ ಆರೆಂಜ್ ಬೆಲ್ಟ್ ಕುಮಿಟೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ವಿಶೇಷ ಸಾಧನೆ ಮೆರೆದಿದ್ದಾರೆ. ಅಜ್ಜಾವರ ಗ್ರಾಮದ ಮುಂಡೋಳಿಮೂಲೆ ಅರವಿಂದ ಮತ್ತು ಶ್ರೀಮತಿ ಚೈತ್ರ ಅರವಿಂದ ದಂಪತಿಯ ಪುತ್ರರಾಗಿರುವ ಇವರು ಮಂಗಳೂರಿನ ಕೆನರಾ ಶಾಲೆಯ ವಿದ್ಯಾರ್ಥಿಯಾಗಿದ್ದು, ಎಕ್ಕೂರಿನ ನಾಗೇಶ್ ಎಂಬವರಿಂದ ತರಬೇತಿ ಪಡೆಯಿತ್ತಿದ್ದಾರೆ.