ಬೇಂಗಮಲೆ : ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಬೈಕ್ ಹಠಾತ್ ಪಂಕ್ಚರ್ – ರಸ್ತೆಗೆ ಬಿದ್ದು ಗಾಯ

0

ಬೇಂಗಮಲೆಯಲ್ಲಿ ವಿದ್ಯಾರ್ಥಿಗಳಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಹಠಾತ್ ಪಂಕ್ಚರ್ ಆಗಿ ಗಾಯಗೊಂಡ ಘಟನೆ ಡಿ.10 ರಂದು ನಡೆದಿದೆ.
ಸುಳ್ಯ ಕಾಲೊಜೊಂದರ ವಿದ್ಯಾರ್ಥಿಗಳು ಬೇಂಗಮಲೆ ಕಡೆಯಿಂದ ಸುಳ್ಯ ಕಡೆಗೆ ಬರುವಾಗ ಬೇಂಗಮಲೆ ಇಳಿಜಾರಿನಲ್ಲಿ ಬೈಕ್ ಪಂಕ್ಚರ್ ಆಗಿ ಶಾಕಿರ್ ಮತ್ತು ಝಿಯಾದ್ ಎಂಬವರು ರಸ್ತೆಗೆ ಬಿದ್ದು ಗಾಯಗೊಂಡರು.


ಇಬ್ಬರಿಗೂ ಕೈ.ಕಾಲು,ಮುಖಕ್ಕೆ ಗಾಯವಾಗಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.