ಪಂಬೆತ್ತಾಡಿ: ಚಿಗುರು ಗೆಳೆಯರ ಬಳಗದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

.ಚಿಗುರು ಗೆಳೆಯರ ಬಳಗ ರಿ ಪಂಬೆತ್ತಾಡಿಗ್ರಾಮ ಪಂಚಾಯತ್ ಕಲ್ಮಡ್ಕ ಇದರ ಸಹಯೋಗದೊಂದಿಗೆಸ್ವಚ್ಛತಾ ಕಾರ್ಯಕ್ರಮ ಡಿ.8 ರಂದು ನಡೆಯಿತು ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಅಶ್ವಥ್ ಬಾಬ್ಲುಬೆಟ್ಟು,ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ,ರಜಿತ್ ಭಟ್ ಪಂಜಬೀಡು ಮೊದಲಾದವರು ಉಪಸ್ಥಿತರಿದ್ದರು.ಕರಿಕ್ಕಳ ದಿಂದ ಅರಮನೆಕಟ್ಟ ಮತ್ತುಗೋಳಿಕಟ್ಟೆಯಿಂದ ಪಂಜ ದೇವಸ್ಥಾನ ರಸ್ತೆ ಯನ್ನು ಸುಮಾರು 50ಅಧಿಕ ಸದಸ್ಯರು ಹಾಗೂ ಊರವರ ಸಹಕಾರದೊಂದಿಗೆ ಸ್ವಚ್ಛತೆ ಗೊಳಿಸಲಾಯಿತು.