ಕಳಂಜದಲ್ಲಿ ಆರೋಗ್ಯ ಉಪಕೇಂದ್ರ ಕಾರ್ಯಾರಂಭ

0

ಕಳಂಜದ ಕೋಟೆಮುಂಡುಗಾರು ಬಳಿ ನಿರ್ಮಾಣವಾದ ನೂತನ ಆರೋಗ್ಯ ಉಪಕೇಂದ್ರ ಕಾರ್ಯಾರಂಭ ಇಂದು ಕಾರ್ಯಾರಂಭ ಮಾಡಿತು.

ಬೆಳಗ್ಗಿನ ವೇಳೆ ಗಣಹವನ ನಡೆಸಲಾಯಿತು. ಈ ಸಂದರ್ಭ ಕಳಂಜ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷೆ ಪ್ರೇಮಲತಾ, ಸದಸ್ಯರುಗಳಾದ ಸುಧಾ, ಕಮಲ, ಪಿ.ಡಿ.ಒ ಗೀತಾ, ಕಾರ್ಯದರ್ಶಿ ಪದ್ಮಯ್ಯ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಹಾಲು ಉತ್ಪಾದಕ ಸಹಕಾರಿ ಸಂಘದ ಕಳಂಜ ಇದರ ಅಧ್ಯಕ್ಷ ರುಕ್ಮಯ್ಯ ಗೌಡ ಕಳಂಜ, ಸಿಸ್ಟರ್ ಬೇಬಿ, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು.