ಅಮರಪಡ್ನೂರು ಗ್ರಾಮದ ಅಮೆಬೈಲು ಐತ್ತಪ್ಪ ನಾಯ್ಕ ರವರ ಪತ್ನಿ ಶ್ರೀಮತಿ ಗೀತಾ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.10 ರಂದು ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು.
ಮೃತರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಡಿ.6 ರಂದು ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಪತಿ, ಅತ್ತೆ ಶ್ರೀಮತಿ ಸರಸ್ವತಿ ಓರ್ವ ಪುತ್ರಿ ಕು.ಮನ್ಮಿತಾ 9 ನೇ ತರಗತಿ ವಿದ್ಯಾರ್ಥಿನಿ, ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.