ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿ ಚುನಾವಣೆ

0

ಸ್ವತಂತ್ರ ಅಭ್ಯರ್ಥಿಯಾಗಿ ಕೇಶವ ಬಂಗ್ಲೆಗುಡ್ಡೆ ನಾಮಪತ್ರ ಸಲ್ಲಿಕೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಡಿ.23ರಂದು ಚುನಾವಣೆ ನಡೆಯಲಿದ್ದು, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕೇಶವ ಬಂಗ್ಲೆಗುಡ್ಡೆ ಅವರು ಡಿ.14ರಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮೋದ್ ಕೈಪಡ್ಕ, ಕೃಷ್ಣಪ್ರಸಾದ್ ಕಾಪಿಲ , ದೇವಿಪ್ರಸಾದ್ ಕದಿಕಡ್ಕ, ರತನ್ ಕೈಪಡ್ಕ, ರತ್ನಾಕರ ಕೈಪಡ್ಕ, ಜೀವನ್ , ಧನುಷ್ ಬಂಗ್ಳೆಗುಡ್ಡೆ ಉಪಸ್ಥಿತರಿದ್ದರು.