ನಿನ್ನೆ ಸಂಜೆ ಸುಮಾರು 7 ಗಂಟೆಯ ವೇಳೆಗೆ ಕಾಡಾನೆಯ ಹಿಂಡು ಕಾಡಿನಿಂದ ರಸ್ತೆಗೆ ಇಳಿದು ದಾಸರಬೈಲು ಕಡೆಗೆ ಇಳಿಯುವುದನ್ನು ಕಂಡಬಂದಿತ್ತು. ದಾಸರಬೈಲು ಭಾಗದಲ್ಲಿ ಹಲವು ಮನೆಗಳು ಅಕ್ಕಪಕ್ಕ ಇರುವ ಕಾರಣದಿಂದ ಕಾಡಾನೆಗಳಿಂದ ಅಪಾಯ ಸಂಭವಿಸಬಹುದಾದ ಹಿನ್ನೆಲೆಯಲ್ಲಿ, ಊರವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಆಗಮಿಸಿದರು.
ಅದಾಗಲೇ ಶ್ರೀ ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ಹಾಗೂ ಸದಸ್ಯರು ಕೂಡ ಸ್ಥಳದಲ್ಲಿ ಸೇರಿದರು., ಅರಣ್ಯ ಇಲಾಖೆಯ ಅಧಿಕಾರಿ ಚಂದ್ರು ಹಾಗೂ ಸಿಬ್ಬಂದಿಗಳು ಬಂದ ಕೂಡಲೇ ಅವರೊಡನೆ ಸೇರಿ ಊರವರು ಹಾಗೂ ಶ್ರೀ ಶಾಸ್ತಾವು ಯುವಕ ಮಂಡಲದ ಸದಸ್ಯರು ಸೇರಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಅಟ್ಟಿದರೆಂದು ತಿಳಿದು ಬಂದಿದೆ.