ಮಂಡೆಕೋಲು ಶಿವಾಜಿನಗರ ನಿವಾಸಿ ಪುರುಷೋತ್ತಮರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.
ಮನೆಯ ಪಕ್ಕದ ಗುಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇಂದು ತಿಳಿದು ಬಂದಿದೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪ್ರೇಮ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೂಲಿ ಕೆಲಸ ಜೀವನ ಮಾಡಿಕೊಂಡಿದ್ದ ಪುರುಷೋತ್ತಮ್ ರವರ ಆತ್ಮಹತ್ಯೆಗೆ ಕಾರಣ ಇನ್ನು ತಿಳಿದು ಬಂದಿಲ್ಲ.
ಇಂದಿನ ಅವರ ಮೊಬೈಲ್ ಸ್ಟೇಟಸ್ ನಲ್ಲಿ “ಓಂ ಶಾಂತಿ ಎನ್ನ ಜೋಕ್ಲನ್ನು ಸೋಕುಡು ತೂವೊಂನ್ಲೆ ಅಣ್ಣ” ಎಂದು ಬರೆದು ಹಾಕಿದ್ದರು.