ಶ್ರೀಮತಿ ಸಿನಿ ಜಾನ್‌ರವರ ಅಂತ್ಯಕ್ರಿಯೆ ಹಾಗೂ ನುಡಿನಮನ

0


ಕಾರ್ಮಿಕ ಮುಖಂಡ ಕೆ.ಪಿ.ಜಾನಿಯವರ ಪತ್ನಿ ಸಿನಿ ಜಾನ್‌ರವರ ಅಂತ್ಯಕ್ರಿಯೆ ನೆಲ್ಲಿಕುಮೇರಿ ಸ್ಮಶಾನದಲ್ಲಿ ಹಾಗೂ ನುಡಿನಮನ ಕಾರ್ಯಕ್ರಮ ಕಲ್ಲುಗುಂಡಿ ಕೆನರಾ ಬ್ಯಾಂಕ್ ಬಳಿಯ ಕೆ.ಪಿ.ಜಾನಿಯವರ ಕಚೇರಿಯಲ್ಲಿ ಇಂದು ನಡೆಯಿತು.


ಮಂಗಳೂರಿನ ಜಾನ್ ಮ್ಯಾಥ್ಯೂ, ಮಹಮ್ಮದ್ ಕುಂಞಿ ಗೂನಡ್ಕ, ಲಕ್ಷ್ಮೀಶ ಗಬ್ಬಲ್ಕಜೆ ಮೊದಲಾದವರು ನುಡಿನಮನ ಸಲ್ಲಿಸಿದರು. ಸಾರ್ವಜನಿಕರಿಗೆ ೧೧ ಗಂಟೆಯಿಂದ ೧೨ ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.