ಗುಜರಾತ್ ರಾಜ್ಯದ ಪ್ರವಾಸೋದ್ಯಮ ಇಲಾಖೆ ಮತ್ತು ಔಟ್ ಲುಕ್ ಮ್ಯಾಗಜಿನ್ ಜಂಟಿಯಾಗಿ ನೀಡುವ 2025 ಪ್ರವಾಸೋದ್ಯಮ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಆಯ್ಕೆ ತೀರ್ಪುಗಾರರ ಸಮಿತಿ ಸದಸ್ಯರಾಗಿ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ, ಮೂಲತಃ ಸುಳ್ಯ ದವರಾದ ಡಾ. ಆರ್. ಕೆ. ನಾಯರ್ ನೇಮಕಗೊಂಡಿದ್ದರು.

ಮಿಯಾವಕಿ ಅರಣ್ಯದ ಮೂಲಕ ರಾಷ್ಟ್ರದಾದ್ಯಂತ ಹಸಿರು ಕ್ರಾಂತಿಗೆ ಕಾರಣರಾಗಿ, ಸ್ಮೃತಿ ವನ್ ನಿರ್ಮಾಣದ ಮೂಲಕ ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗಮನಿಸಿ ತಳ ಮಟ್ಟದ ಸಾಧಕರನ್ನು ಗುರುತಿಸಲು ಈ ಸ್ಥಾನ ನೀಡಿದೆ.