ಕೆವಿಜಿ ಕಾನೂನು ಕಾಲೇಜಿನ 2024-25 ನೇ ಸಾಲಿನ ವಾರ್ಷಿಕ ಕ್ರೀಡೋತ್ಸವವು ದ. 17 ಮತ್ತು 18 ನೇ ಡಿಸೆಂಬರ್ ರಂದು ನಡೆಯಿತು. ಕ್ರೀಡೋತ್ಸವದ ಉದ್ಘಾಟನೆ ಯನ್ನು ಬೆಳ್ಳಾರೆ ಸರಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾI ರಾಮಚಂದ್ರ ಕೆ ನೆರವೇರಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಯನ್ನು ಕೆವಿಜಿ ಕಾನೂನು ಕಾಲೇಜಿನ ಶೈಕ್ಷಣಿಕ ಸಲಹೆಗಾರ . ಕೆ ವಿ ಹೇಮಾನಾಥ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತಧಿಕಾರಿ ಪ್ರೊ. ಕೆ ವಿ ದಾಮೋದರ ಗೌಡ, ಕಾಲೇಜಿನ ಪ್ರಾoಶುಪಾಲರಾದ ಡಾ. ಉದಯಕೃಷ್ಣ ಬಿ, ವಿದ್ಯಾರ್ಥಿ ಕ್ಷೇಮಾಧಿಕಾರಿ, ಪ್ರೊ. ಟೀನಾ ಎಚ್. ಎಸ್, ಕಾನೂನು ಕಾಲೇಜಿನ ಕಛೇರಿ ಅಧೀಕ್ಷಕಿ ಶ್ರೀಮತಿ ಕೌಸಲ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು . ರಮ್ಯಾ ಪ್ರಾರ್ಥಿಸಿ, ಪ್ರಾಂಶುಪಾಲರಾದ ಡಾ. ಉದಯಕೃಷ್ಣ ಬಿ ಸ್ವಾಗತಿಸದರು. ವಿದ್ಯಾರ್ಥಿನಿ ಕು. ವಿದ್ಯಾಶ್ರೀ ವಂದಿಸಿದರು. ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಪೂರ್ಣೇಶ್ ಪ್ರಮಾನವಚನಭೋದಿಸಿದರು.ವಿದ್ಯಾರ್ಥಿನಿಯರಾದ ಯಶಸ್ವಿನಿ ಹಾಗೂ ಕು. ಕೀರ್ತನ ಕಾರ್ಯಕ್ರಮ ನಿರೂಪಿಸಿದರು. ಈ ಸಂಧ ರ್ಭದಲ್ಲಿ ಉಪನ್ಯಾಸಕರು,, ದೈಹಿಕ ಶಿಕ್ಷಣ ನಿರ್ದೇಶಕರುಗಳು, ಹಾಗೂ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.