ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಸಹಕಾರಿ ಅಭಿವೃದ್ಧಿ ರಂಗದ ಕೆ.ಆರ್. ಜಗದೀಶ್ ರೈ ಗೆಲುವು
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿ ಕೆ.ಆರ್
ಜಗದೀಶ್ ರೈ ಸಂಪಾಜೆ ಅವರು 310 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಿಂದ ಸಮನ್ವಯ ಸಹಕಾರಿ ಬಳಗದ ಅಭ್ಯರ್ಥಿಯಾಗಿ ಕಣದಲ್ಲಿದ್ದ ವರದರಾಜ್ ಸಂಕೇಶ್ 181 ಮತ ಪಡೆದು ಪರಾಭವಗೊಂಡರು. ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕೇಶವ ಬಂಗ್ಳೆಗುಡ್ಡೆ ಅವರು 166 ಮತ ಪಡೆದು ಪರಾಭವಗೊಂಡರು.