ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು , ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ , ನಮ್ಮ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಊರ ಪರವೂರ ವಿದ್ಯಾಭಿಮಾನಿಗಳ ಉದಾರ ಕೊಡುಗೆ ಹಾಗೂ ಎಂ.ಎಸ್. ಸುಬ್ರಹ್ಮಣ್ಯ ಮದುವೆಗದ್ದೆಯವರ ಪ್ರಧಾನ ಕೊಡುಗೆಯೊಂದಿಗೆ ನಿರ್ಮಾಣಗೊಂಡ ಐಶ್ವರ್ಯ ಮದುವೆಗದ್ದೆ ಸಭಾಭವನದ ಉದ್ಘಾಟನಾ ಸಮಾರಂಭ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಡಿ.24ರಂದು ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಸಭಾಭವನವನ್ನು ಉದ್ಘಾಟಿಸಿ, ಶುಭಹಾರೈಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಅವರು ದೀಪ ಬೆಳಗಿಸಿ, ಶುಭಹಾರೈಸಿದರು. ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಪಿ.ಬಿ. ದಿವಾಕರ ರೈ ಅವರು ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಮಾನವ ಸಂಪನ್ಮೂಲ ಅಧಿಕಾರಿ ಭವಾನಿಶಂಕರ ಪಿಂಡಿಮನೆ ಅವರು ದಾನಿಗಳ ನಾಮಫಲಕ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಎಂ.ಎಸ್. ಸುಬ್ರಹ್ಮಣ್ಯ ಮದುವೆಗದ್ದೆ, ಡಾ. ತಾಜುದ್ಧೀನ್ ಕೆ.ಎಂ , ಕೆ.ಆರ್. ಆನಂದ ಕಲ್ಲುಗದ್ದೆ, ಸತೀಶ್ ದೋಳ, ಸಂತೋಷ್ ಕುತ್ತಮೊಟ್ಟೆ, ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಶ್ರೀಮತಿ ತೇಜಾವತಿ ಮಣೀಶ್ ಉಳುವಾರು, ಕೆ.ಬಿ. ದಯಾನಂದ, ಕೆ.ಆರ್. ಪದ್ಮನಾಭ ಅರಂತೋಡು, ಸಂಶುದ್ಧೀನ್ , ಸೋಮಶೇಖರ ಹೆಚ್.ಎಂ., ಕಾಲೇಜಿನ ಪ್ರಾಂಶುಪಾಲ ಸುರೇಶ್ ವಾಗ್ಲೆ ಉಪಸ್ಥಿತರಿದ್ದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ದಿವಾಕರ ರೈ ಅವರು ಸ್ವಾಗತಿಸಿದರು.