ವಿಜೃಂಭಣೆಯಿಂದ ನಡೆದ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವ

0

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಡಿ. 22ರಿಂದ ಡಿ. 27ರ ತನಕ ನಡೆಯಲಿದ್ದು, ಡಿ. 26ರಂದು ರಾತ್ರಿ ವಿಜೃಂಭಣೆಯ ಬ್ರಹ್ಮ ರಥೋತ್ಸವ, ಬಳ್ಪ ಬೆಡಿ ನಡೆಯಿತು.

ಸಂಜೆ ವಿವಿಧ ಭಜನಾ ತಂಡಗಳಿಂದ ನೃತ್ಯ ಭಜನಾ ಸಂಕೀರ್ತನೆ ಮತ್ತು ಜಗದೀಶ್ ಆಚಾರ್ಯ ಪುತ್ತೂರು ಇವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲುರವರಿಗೆ ಸನ್ಮಾನ ಮತ್ತು ಕ್ರೀಡಾ ಕ್ಷೇತ್ರದ ವಿಶೇಷ ಸಾಧನೆಗಾಗಿ ಜಸ್ಮಿತಾ ಕೊಡೆಂಕಿರಿಯವರಿಗೆ ಗೌರವಾರ್ಪಣೆ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ, ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಗೌರವಾಧ್ಯಕ್ಷ ಭಾಸ್ಕರ ಗೌಡ ಪಂಡಿ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಬಳ್ಪ ಕೇನ್ಯ ಗ್ರಾಮ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯಕುಮಾರ್ ಕಾಂಜಿ ಮತ್ತು ಮಹೇಶ್ ಸೂಂತಾರು ಸನ್ಮಾನ ಪತ್ರ ವಾಚಿಸಿದರು. ಸುಬ್ರಹ್ಮಣ್ಯ ಕುಳ ಕಾರ್ಯಕ್ರಮ ನಿರೂಪಿಸಿದರು. ಡಿ. 27ರಂದು ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಗಳು ನಡೆದು ಸಂಜೆ ಅವಭೃತಸ್ನಾನ, ಧ್ವಜಾವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.