ಡಿ.31 : ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈ ನಿವೃತ್ತಿ

0

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ  ವಿಜಯ ರೈ ನೆಲ್ಯಾಜೆಯವರು ಡಿ.31 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ. ಇವರು ಸಂಘದಲ್ಲಿ ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

1983 ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಹಕಾರಿ ಸಂಘಕ್ಕೆ ಸೇರಿದ ಇವರು ಬಳಿಕ ಗುಮಾಸ್ತರಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದರು. 2022 ರಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿ ಹೊಂದಿದ್ದ ಇವರು ಸಂಘದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳಲಿದ್ದಾರೆ.

ಪಾಲ್ತಾಡಿ ಗ್ರಾಮದ ನೆಲ್ಯಾಜೆ ದಿ.ದೂಮಣ್ಣ ರೈ ಮತ್ತು ಶ್ರೀಮತಿ ಶೇಷಮ್ಮ ರೈ ದಂಪತಿ ಪುತ್ರರಾದ ಇವರ ಪತ್ನಿ ಶ್ರೀಮತಿ ನಳಿನಾಕ್ಷಿಯವರು ಚೆನ್ನಾವರ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಪವನ್ ಕುಮಾರ್ ಪಿಡಬ್ಲ್ಯುಡಿ ಕಾಂಟ್ರಾಕ್ಟರ್ ಆಗಿದ್ದಾರೆ.

ಪುತ್ರಿ ಪ್ರಣಮ್ಯ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂ.ಬಿ.ಎ ವ್ಯಾಸಾಂಗ ಮಾಡುತ್ತಿದ್ದಾರೆ.