ಕೆ.ಎಸ್.ಆರ್.ಟಿ.ಸಿ ಸಂಚಾರ ನಿಯಂತ್ರಕರಾಗಿದ್ದ ಪುತ್ತೂರು ತಾಲೂಕು ಬಿಳಿನೆಲೆ ಗ್ರಾಮದ ಕಳಿಗೆಮನೆ ವೇಣುಗೋಪಾಲ್ ರವರು ಡಿ.31 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಇವರು ವಿದ್ಯಾಭ್ಯಾಸ ಮುಗಿಸಿ 1997 ರಲ್ಲಿ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿ ಸೇರ್ಪಡೆಗೊಂಡು, ನಂತರ 2005 ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗಕ್ಕೆ ವರ್ಗಾವಣೆಯಾಗಿ ಕನಕಪುರ ಘಟಕದಲ್ಲಿ ಸೇವೆ ಸಲ್ಲಿಸಿ, ಹಾಸನ ವಿಭಾಗಕ್ಕೆ ವರ್ಗಾವಣೆಗೊಂಡು ಹಾಸನ 1ನೇ ಘಟಕದಲ್ಲಿ ಸೇವೆ ಸಲ್ಲಿಸಿದರು. 2019 ರಲ್ಲಿ ಭಡ್ತಿ ಹೊಂದಿ ಆಲೂರು ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ, 2020 ರಲ್ಲಿ ವಿಭಾಗೀಯ ತನಿಖಾದಳದಲ್ಲಿ ಸೇವೆ ಸಲ್ಲಿಸಿ ಪುನ: ಹಾಸನ ವಿಭಾಗದಿಂದ ಪುತ್ತೂರು ವಿಭಾಗಕ್ಕೆ ವರ್ಗಾವಣೆಯಾಗಿ ಸುಳ್ಯ ಘಟಕಕ್ಕೆ ಸೇರ್ಪಡೆಗೊಂಡು 13.2.2020 ರಿಂದ ಕುಕ್ಕೆಸುಬ್ರಹ್ಮಣ್ಯದ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಪತ್ನಿ ಶ್ರೀಮತಿ ತೇಜಾಕ್ಷಿ ಯು.ಜಿ ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಪುತ್ರಿ ರಾಜಶ್ರೀ ಪ್ರಾಥಮಿಕ ಆರೋಗ್ಯ ಕೇಂದ್ರ ಬೋಳೂರು, ಮಂಗಳೂರು ಇಲ್ಲಿ ಪ್ರಯೋಗಾಲಯ ತಂತ್ರಜ್ಞೆಯಾಗಿದ್ದು, ಪುತ್ರ ಕಾರ್ತಿಕ್ ಇಂಜಿನಿಯರಿಂಗ್ ಮಾಡಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.