ಕೆ.ಎಫ್.ಡಿ.ಸಿ. ಕಾರ್ಖಾನೆ ಉದ್ಯೋಗಿ ಬಾಲಸುಬ್ರಹ್ಮಣ್ಯಂ ಜಿ.ಎಂ. ರವರಿಗೆ ಬೀಳ್ಕೊಡುಗೆ

0

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿ. ಸಿ.ಎಲ್.ಎಫ್ ಮೇದಿನಡ್ಕ ಕಾರ್ಖಾನೆಗಳ ಉದ್ಯೋಗಿ ಬಾಲಸುಬ್ರಹ್ಮಣ್ಯಂ ಜಿ.ಎನ್ ರವರು ಕಳೆದ 38 ವರ್ಷಗಳಿಂದ ಸೇವೆ ಸಲ್ಲಿಸಿ ಡಿ.31 ರಂದು ವಯೋ ನಿವೃತ್ತಿ ಹೊಂದಿದ ಅವರನ್ನು ಕಚೇರಿಯಲ್ಲಿಂದು ಸನ್ಮಾನಿಸಿ ಬೀಳ್ಕೋಡಲಾಯಿತು.

ಕೆ.ಎಫ್.ಡಿ.ಸಿ ಯ ವ್ಯವಸ್ಥಾಪಕರಾದ ದೇವರಾಜ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐವರ್ನಾಡು ಸಹಾಯಕ ವಿಭಾಗೀಯ ವ್ಯವಸ್ಥಾಪಕ ಅರುಣ್ ಕುಮಾರ್, ಸುಳ್ಯ ಐವರ್ನಾಡು ಕಚೇರಿ ಅಧೀಕ್ಷಕರಾದ ದಿವಾಕರ , ಕಚೇರಿ ಅಧೀಕ್ಷಕಿ ಶ್ರೀಮತಿ ಪವಿತ್ರ ಸುಳ್ಯ, ಸಹಾಯಕ ಕಾರ್ಖಾನೆ ವ್ಯವಸ್ಥಾಪಕ ಗೋಪಾಲಕೃಷ್ಣ ಭಟ್, ಕಾರ್ಮಿಕ ಮುಖಂಡ ಮಹೇಶ್,ಬಾಲಸುಬ್ರಹ್ಮಣ್ಯಂ ಜಿ.ಎಂ ಮತ್ತು ಶ್ರೀಮತಿ ಜಯಲಕ್ಷ್ಮಿ ದಂಪತಿ ಉಪಸ್ಥಿತರಿದ್ದರು.

ನಿವೃತ್ತಿಯಾಗಿರುವ ಬಾಲಸುಬ್ರಹ್ಮಣ್ಯಂ ಮತ್ತು ಜಯಲಕ್ಷ್ಮಿ ದಂಪತಿಯವರನ್ನು ಕೆ.ಎಫ್.ಡಿ.ಸಿ ಕಚೇರಿಯ ಉದ್ಯೋಗಿಗಳು ಹಾಗೂ ಕಾರ್ಮಿಕರು ಮತ್ತು ಬಂಧು ವರ್ಗದವರು ಸನ್ಮಾನಿಸಿದರು. ಆಗಮಿಸಿದ ಎಲ್ಲರೂ ನಿವೃತ್ತಿ ಹೊಂದಿದ ಬಾಲಸುಬ್ರಹ್ಮಣ್ಯಂ ರವರನ್ನು ಅಭಿನಂದಿಸಿ ಶುಭ ಹಾರೈಸಿದರು.


ಶ್ರೀಮತಿ ಪ್ರಿಯಾ ಎಂ.ಕೆ. ಪ್ರಾರ್ಥಿಸಿದರು. ಮಂಜುನಾಥ್ ರವರು ಅಭಿನಂದನಾ ಭಾಷಣ ಮಾಡಿದರು. ಸಿಬ್ಬಂದಿ ಅವಿನ್ ಸ್ವಾಗತಿಸಿ, ವಂದಿಸಿದರು. ಶ್ರೀಮತಿ ಲತಾ ಕಾರ್ಯಕ್ರಮ ನಿರೂಪಿಸಿದರು. ಕೆ.ಎಫ್ ಡಿ.ಸಿ ಕಚೇರಿ ಸಿಬ್ಬಂದಿ ವರ್ಗದವರು ಹಾಗೂ ‌ಕಾರ್ಮಿಕ ವೃಂದದವರು ಭಾಗವಹಿಸಿದರು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.