ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವದ ಸಂಭ್ರಮ

0

ವಿವಿಧ ಸಂಘ ಸಂಸ್ಥೆಗಳಿಂದ ಶ್ರಮದಾನ

ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವದ ಸಂಭ್ರಮದ ಅಂಗವಾಗಿ ಡಿ.29ರಂದು ಶ್ರಮದಾನ ನಡೆಯಿತು. ದೇವಳದ ವಠಾರ, ಒಳಾಂಗಣ, ಹೊರಾಂಗಣ, ಗಿಡ ಗಂಟಿ ತೆರವು ಗೊಳಿಸಿ ಮಣ್ಣು ಕಲ್ಲು ತೆರವು ಗೊಳಿಸಿ, ಸ್ವಚ್ಛತೆಗೊಳಿಸಲಾಯಿತು.

ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷೆ, ಶಾಸಕಿ ಕು. ಬಾಗೀರಥಿ ಮುರುಳ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರಮದಾನ ಕಾರ್ಯದಲ್ಲಿ ನಿಂತಿಕಲ್ಲು ವಲಯ ಶೌರ್ಯ ವಿಪತ್ತು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಗತಿಬಂಧು, ಸ್ವ ಸಹಾಯ ಗುಂಪುಗಳು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿದಿ ಗಳು, ಸದಸ್ಯರುಗಳು, ಪದಾಧಿಕಾರಿಗಳು, ಒಡಿಯೂರು ಮುರುಳ್ಯ ವಲಯ ಘಟಕ ಪದಾಧಿಕಾರಿಗಳು, ಸೇವಾ ದೀಕ್ಷಿತೆಯರು, ಸದಸ್ಯರುಗಳು, ವ್ಯವಸ್ಥಾಪನ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯವರು, ಕೂಡು ಕಟ್ಟು ಭಕ್ತಾದಿಗಳು ಭಾಗವಹಿಸಿದ್ದರು.