ಆಲೆಟ್ಟಿ ಸದಾಶಿವ ದೇವಳದ ಉಳ್ಳಾಕುಲು ಚಾವಡಿ ಪ್ರತಿಷ್ಠಾ ಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ – ಪೂರ್ವ ‌ತಯಾರಿ ಸಭೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನ ಮಾಡಾರಮನೆ ಗುಂಡ್ಯ ಸಾನಿಧ್ಯದ ಮೊರಂಗಲ್ಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ಚಾವಡಿಯ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಫೆ.2 ಮತ್ತು 3 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಪೂರ್ವ ತಯಾರಿಯ ಸಭೆಯು ದೇವಳದ ಸಭಾಭವನದಲ್ಲಿ ಡಿ.29 ರಂದು ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರು ಅಧ್ಯಕ್ಷತೆ ವಹಿಸಿದ್ದರು. ದೇವಳದ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರು ‌ಪ್ರಾರ್ಥಿಸಿ ಪೂಜೆಯನ್ನು ‌ನೆರವೇರಿಸಿದರು.

ಈ ಸಂದರ್ಭದಲ್ಲಿ ಮೊಕ್ತೇಸರರಾದ
ಶ್ರೀಪತಿ ಬೈಪಡಿತ್ತಾಯ, ಜಯಪ್ರಕಾಶ್ ಬೈಪಡಿತ್ತಾಯ, ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ,
ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ,ಜೀ.ಸ.ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಆರ್ಥಿಕ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಸೇ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ‌ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಉದಯ ಕುಡೆಕಲ್ಲು ವೇದಿಕೆಯಲ್ಲಿದ್ದರು.

ವಿವಿಧ ಉಪಸಮಿತಿಯ ಸದಸ್ಯರಾದಕೊರಗಪ್ಪ ಮಾಸ್ತರ್ ಕಣಕ್ಕೂರು, ವೆಂಕಟ್ರಮಣ ಭಟ್ ನೆಡ್ಚಿಲು,ಗಗನ್ ಬೈಪಡಿತ್ತಾಯ ಆಲೆಟ್ಟಿ, ಸತೀಶ್ ಕುಂಭಕೋಡು, ಯತಿರಾಜ್ ಭೂತಕಲ್ಲು,
ಪುರುಷೋತ್ತಮ ದೋಣಿಮೂಲೆ, ರತ್ನಾಕರ ಕುಡೆಕಲ್ಲು,
ಅಚ್ಚುತ ಮಣಿಯಾಣಿ ಆಲೆಟ್ಟಿ, ನಳಿನಿ ರೈ ಆಲೆಟ್ಟಿ, ಸುಂದರ ಆಲೆಟ್ಟಿ,
ಸುಧಾಕರ ಆಲೆಟ್ಟಿ, ದಯಾನಂದ ಪತ್ತುಕುಂಜ, ಪ್ರವೀಣ್ ಆಲೆಟ್ಟಿ,
ದಿವಾಕರ ಭೂತಕಲ್ಲು, ರಾಮಚಂದ್ರ ಬಾಳೆಹಿತ್ಲು, ಮಹಾಬಲ ರೈ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ ,ಲಕ್ಷ್ಮಣ ಗೌಡ ಪರಿವಾರ, ಶ್ರೀನಾಥ್ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ, ಚಂದ್ರಶೇಖರ ಯಾದವ್ ಆಲೆಟ್ಟಿ, ಅವಿನ್ ಆಲೆಟ್ಟಿ,ಶರತ್ ಕುಡೆಕಲ್ಲು, ಗೀತಾ ಸುಧಾಮ ಆಲೆಟ್ಟಿ,
ಗೌರಿ ಆಲೆಟ್ಟಿ, ಅಮೂಲ್ಯ ಕುಂಚಡ್ಕ, ರಘು ಸುಳ್ಯ, ಯಮುನಾ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.