ಕೊಡಗು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿ ಚುನಾವಣೆ

0

ಸಾಲಗಾರ ಸಾಮಾನ್ಯ ಕ್ಷೇತ್ರದ ಆರು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು

ಎಲ್ಲಾ 13 ಸ್ಥಾನ ಗೆದ್ದು ಕ್ಲೀನ್ ಸ್ವೀಪ್ ಸಾಧಿಸಿದ ಎನ್.ಸಿ. ಅನಂತ್ ಊರುಬೈಲು ನೇತೃತ್ವದ ಬಿಜೆಪಿ ಬೆಂಬಲಿತರಿಗೆ ಮತ್ತೆ ಅಧಿಕಾರ

ಖಾತೆ ತೆರೆಯಲಾಗದೆ ನಿರಾಸೆ ಅನುಭವಿಸಿದ ಕಾಂಗ್ರೆಸ್ ಬೆಂಬಲಿತರು

ಕೊಡಗು ಸಂಪಾಜೆಯ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಿ.29ರಂದು ನಡೆದ ನಿರ್ದೇಶಕರುಗಳ ಆಯ್ಕೆಯ ಚುನಾವಣೆಯಲ್ಲಿ ಎಲ್ಲಾ 13 ನಿರ್ದೇಶಕ ಸ್ಥಾನಗಳಲ್ಲಿ ಗೆದ್ದು ಕ್ಲೀನ್ ಸ್ವೀಪ್ ಸಾಧಿಸುವ ಮೂಲಕ ಬಿಜೆಪಿ ಮುಖಂಡ ಎನ್.ಸಿ. ಅನಂತ್ ಊರುಬೈಲು ಅವರ ನೇತೃತ್ವದ ಬಿಜೆಪಿ ಬೆಂಬಲಿತರು ಸಹಕಾರಿ ಸಂಘದ ಆಡಳಿತ ಹಿಡಿದಿದ್ದಾರೆ. ಒಂದೂ ಸ್ಥಾನ ಗೆಲ್ಲದೆ ಖಾತೆ ತೆರೆಯುವಲ್ಲಿ ಕಾಂಗ್ರೆಸ್ ಬೆಂಬಲಿತರು ನಿರಾಸೆ ಅನುಭವಿಸಿದ್ದಾರೆ.

ಸಾಲಗಾರ ಸಾಮಾನ್ಯ ಕ್ಷೇತ್ರದ ಎಲ್ಲಾ ಆರು ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗಿದೆ.


ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಎನ್.ಸಿ. ಅನಂತ್ ಊರುಬೈಲು 1193 , ತೀರ್ಥಪ್ರಸಾದ್ ಕೋಲ್ಚಾರು 886, ದಯಾನಂದ ಪನೇಡ್ಕ 902, ಯಶವಂತ ದೇವರಗುಂಡ 875, ರಾಮಮೂರ್ತಿ ಉಂಬಳೆ 802 , ಹೊನ್ನಪ್ಪ ಕಾಸ್ಪಾಡಿ 778 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣದಲ್ಲಿದ್ದ ಆದಂ ಸಂಟ್ಯಾರ್ 776, ಪಿ.ಎ. ಗಣಪತಿ ‌ಕಲ್ಯಾಳ 604, ಸುಧೀರ್ ಹೊದ್ದೆಟ್ಟಿ 421, ರವಿರಾಜ್ ಹೊಸೂರು 525, ತಿರುಮಲ ಸೋನ 495, ಭುವನೇಶ್ವರ ದಬ್ಬಡ್ಕ 450 ಮತ ಪಡೆದು ಪರಾಭವಗೊಂಡಿದ್ದಾರೆ.

ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುರುಷೋತ್ತಮ ಬಿ.ಬಿ. 254 ಹಾಗೂ ಲೀಲಾಪ್ರಸಾದ್ 118 ಮತ ಪಡೆದು ಸೋಲನುಭವಿಸಿದ್ದಾರೆ.

ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಆದಂ ಸಂಟ್ಯಾರ್ ಹಾಗೂ ಬಿಜೆಪಿ ಬೆಂಬಲಿತರಾದ ಹೊನ್ನಪ್ಪ ಕಾಸ್ಪಾಡಿ ಮತ್ತು ರಾಮಮೂರ್ತಿ ಉಂಬಳೆ ಅವರ ಮಧ್ಯೆ ಕೊನೆಯ ಹಂತದಲ್ಲಿ ಮತಗಳ ಏರಿಳಿತ ಕಂಡು ಬಂದಿತಾದರೂ ಕೊನೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು.