ಮಡಪ್ಪಾಡಿ ಕೃಷಿ ಪತ್ತಿನ ಸಹ ಕಾರ ಸಂಘದಲ್ಲಿ 7 ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ ಸಹಕಾರ ಸಂಘದ ಆಡಳಿತ ಹಿಡಿದಿದೆ. 5 ಸ್ಥಾಾನ ಗಳನ್ನು ಕಾಂಗ್ರೆಸ್ ಬೆಂಬಲಿತರು ಗೆದ್ದು ಕೊಂಡಿದ್ದಾರೆ.
ಸಾಮಾನ್ಯ 6 ಸ್ಥಾನಕ್ಕೆೆ 4 ಕಾಂಗ್ರೆಸ್, 2 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯರಾಮ ಪಿ.ಸಿ. 412 ಮತಗಳು, ಮಿತ್ರದೇವ ಮಡಪ್ಪಾಡಿ 356, ಸೋಮಶೇಖರ ಕೇವಳ 345, ಚಂದ್ರಶೇಖರ ಗುಡ್ಡೆ 296 ಮತಗಳು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಿನಯಕುಮಾರ್ ಮುಳುಗಾಡು 350 ಮತಗಳು, ಕರುಣಾಕರ ಪಾರೆಪ್ಪಾಡಿ 340 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
ಕಾಂಗ್ರೆೆಸ್ ಬೆಂಬಲಿತ ಅಭ್ಯರ್ಥಿ ಕುಸುಮಾಧರ ಕುತ್ಯಾಳ 284 ಮತಗಳು, ಸುನಿಲ್ ಕಡ್ಯ 258 ಮತಗಳು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಾದ ಆನಂದ ಅಂಬೆಕಲ್ಲು 287 ಮತಗಳು, ಆನಂದ ಕಡ್ಯ 227 ಮತಗಳು, ವಸಂತಕುಮಾರ್ ಹಾಡಿಕಲ್ಲು 216 ಮತಗಳು ಮತ್ತು ಎನ್.ಟಿ. ಹೊನ್ನಪ್ಪ 283 ಮತಗಳನ್ನು ಪಡೆದು ಪರಾಭವಗೊಂಡರು
ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ಸಚಿನ್ ಬಳ್ಳಡ್ಕ 327 ಮತಗಳನ್ನು ಪಡೆದು ವಿಜಯಿಯಾದರು. ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ ಅಭ್ಯರ್ಥಿ ಅಜಯ್ ವಿ.ಸಿ. 306 ಮತಗಳನ್ನು ಪಡೆದು ಪರಾಭವಗೊಂಡರು.
ಅನುಸೂಚಿತ ಪಂಗಡ ಮೀಸಲು ಒಂದು ಸ್ಥಾಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರದೀಪ್‌ಕುಮಾರ್ ಪಿ.ಬಿ. 330 ಮತಗಳನ್ನು ಜಯ ಗಳಿಸಿದ್ದಾರೆ. ಕಾಂಗ್ರೆೆಸ್ ಬೆಂಬಲಿತ ಸಹಕಾರ ಬಳಗದ ಅಭ್ಯರ್ಥಿ ಪೇರಪ್ಪ ಮಲೆ 301 ಮತಗಳನ್ನು ಪಡೆದು ಪರಾಭವಗೊಂಡರು.
ಅನುಸೂಚಿತ ಜಾತಿ ಮೀಸಲು ಒಂದು ಸ್ಥಾಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆನಂದ ಎಸ್. 333 ಮತಗಳನ್ನು ಜಯ ಗಳಿಸಿದ್ದಾರೆ. ಕಾಂಗ್ರೆೆಸ್ ಬೆಂಬಲಿತ ಅಭ್ಯರ್ಥಿ ಶೇಖರ ಕೆ.ಪಿ. 301 ಮತಗಳನ್ನು ಪಡೆದು ಪರಾಭವಗೊಂಡರು.
ಮಹಿಳಾ 2 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪಧೆಸಿದ್ದ ಪ್ರವೀಣ ಯತೀಂದ್ರನಾಥ ಪಾಲ್ತಾಡು 348 ಮತಗಳನ್ನು, ಬಿಜೆಪಿ ಬೆಂಲಿತ ಅಭ್ಯರ್ಥಿ ಶಕುಂತಲಾ ಕೇವಳ 341 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಸಂತಿ ಕೊಡಪಾಲ 263 ಮತಗಳನ್ನು ಮತ್ತು ಚಂದ್ರಮತಿ ಪಿ.ಜಿ. 307 ಮತಗಳನ್ನು ಪಡೆದು ಪರಾಭವಗೊಂಡರು.
ಹಿಂದುಳಿದ ವರ್ಗ ಎ. ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಶಿವರಾಮ ಚಿರೆಕಲ್ಲು 320 ಮತಗಳನ್ನು ಪಡೆದು ವಿಜಯಿಯಾದರೆ, ಪ್ರತಿಸ್ಪರ್ಧಿ ಕಾಂಗ್ರೆೆಸ್ ಬೆಂಬಲಿತ ಭವ್ಯಾ ಚಿರೆಕಲ್ಲು 318 ಮತಗಳನ್ನು ಪಡೆದರು. ಮೊದಲಿಗೆ ಎಣಿಕೆ ಮಾಡಿದಾಗ ಇಬ್ಬರಿಗೂ ತಲಾ 320 ರಂತೆ ಮತಗಳು ಬಂದಿದ್ದವು. ಬಳಿಕ ಮರು ಎಣಿಕೆ ಮಾಡಿದಾಗ ಶಿವರಾಮರಿಗೆ 320 ಮತಗಳು ಹಾಗೂ ಭವ್ಯಾ ಚಿರೆಕಲ್ಲು ರಿಗೆ 318 ಮತಗಳು ಬಂದವು.
30 ವರ್ಷಗಳ ಬಳಿಕ ಅಧಿಕಾರ ಹಿಡಿದ ಬಿಜೆಪಿ : ಮಡಪ್ಪಾಾಡಿ ಸೊಸೈಟಿಯಲ್ಲಿ ಬ್ಲಾಕ್ ಕಾಂಗ್ರೆೆಸ್ ಅಧ್ಯಕ್ಷರೂ ಆಗಿರುವ ಪಿ.ಸಿ.ಜಯರಾಮರವರು ಕಳೆದ 30 ವರ್ಷಗಳಿಂದ ಅಧಿಕಾರ ಹಿಡಿದಿದ್ದರು. ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಮತ ಎಣಿಕೆ ಆರಂಭದಲ್ಲಿ ಇತ್ತಂಡಗಳಲ್ಲಿಯೂ ಕೂತೂಹಲ ಕೆರಳಿಸಿತ್ತು. ಮೊದಲಿಗೆ ಪ.ಪಂಗಡದ ಮೀಸಲು ಕೇತ್ರದ ಅಭ್ಯರ್ಥಿಯ ಫಲಿತಾಂಶ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಒಲಿದು ಬಂದಾಗಲೇ ಬಿಜೆಪಿ ಕಾರ್ಯಕರ್ತರಲ್ಲಿ ಹರ್ಷೋದ್ಘಾರ ಮೊಳಗಲು ಆರಂಭವಾಯಿತು. ಸಾಮಾನ್ಯ ಕ್ಷೇತ್ರದ ಮತ ಎಣಿಕೆ ಕಾರ್ಯ ಕೊನೆಯಲ್ಲಿ ನಡೆದು ಎಣಿಕೆ ಕಾರ್ಯ ಮುಗಯುವವ ಕುತೂಲ ಕೆರಳಿಸಿತ್ತು. ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಗುತ್ತಿಗಾರು ಸೊಸೈಟಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪ್ರಮುಖರಾದ ಕೃಷ್ಣಯ್ಯ ಮೂಲೆತೋಟ ಮತ್ತರರಿದ್ದು, ವಿಜಯೋತ್ಸವ ಆಚರಿಸಿದರು.