ಪಂಜದ ಕೃಷ್ಣನಗರದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಓರ್ವ ಗಾಯ ಗೊಂಡ ಘಟನೆ ಡಿ.29 ರಂದು ರಾತ್ರಿ ವರದಿಯಾಗಿದೆ.
ಪಂಜ ಕಡೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಜೀವನ್ ಎಂಬುವರು ಗಾಯ ಗೊಂಡಿದ್ದು ಅವರನ್ನು ಅಂಬ್ಯುಲೆನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರಿನಲ್ಲಿದ್ದ ದೇವಣ್ಣ ಎಂಬವರು ಪಾರಾಗಿದ್ದಾರೆ.