ಸುಳ್ಯ :ಜಾಲ್ಸೂರು ಅಪಘಾತ ಪಡಿಸಿದ ಆರೋಪಿ ದೋಷಮುಕ್ತ

0

ಕಳೆದ ವರ್ಷ ಸುಳ್ಯ ತಾಲೂಕು ಜಾಲ್ಸೂರು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಬೈಕ್ ಚಾಲಕ ರಾಜಶೇಖರ ಎಂಬತನನ್ನು ದೋಷ ಮುಕ್ತ ಗೊಳಿಸಿ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯ ಆದೇಶಿಸಿದೆ.


ದಿನಾಂಕ : 28-12-2023ರಂದು ಮಾಣಿ – ಮೈಸೂರು ಹೆದ್ದಾರಿ ರಸ್ತೆಯ ಸುಳ್ಯ ತಾಲೂಕು ಜಾಲ್ಸುರು ಗ್ರಾಮದ ಜಾಲ್ಸೂರು ಪೇಟೆಯ ಫಾರೆಸ್ಟು ಚೆಕ್ ಪೋಸ್ಟ್ ಆಫೀಸಿನ ಎದುರು ಸಮಯ ಬೆಳಿಗ್ಗೆ 11 ಗಂಟೆಗೆ ರಸ್ತೆ ದಾಟಲು ನಿಂತಿದ್ದ ಪುರುಷೋತ್ತಮ ರವರಿಗೆ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ರಾಜಶೇಖರ ಎಂಬತನು ಚಲಾಯಿಸಿ ಕೊಂಡು ಬರುತ್ತಿದ್ದ ಬೈಕ್ ಡಿಕ್ಕಿಯಾಗಿತ್ತು. ಪರಿಣಾಮ ಗಂಭೀರ ಗಾಯಗೊಂಡ ಪುರುಷೋತ್ತಮ ರವರನ್ನು ಅಲ್ಲಿದ್ದ ಜನರು ಉಪಚರಿಸಿ ಆಟೋ ರಿಕ್ಷಾದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ ವೈದ್ಯರು ಸೂಚಿಸಿದಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾಣಿ ಎಂಬಲ್ಲಿಗೆ ತಲುಪಿದಾಗ ಪುರುಷೋತ್ತಮ ರವರು ಯಾವುದೇ ಪ್ರತಿಕ್ರಿಯೆ ನೀಡದಾಗ ವಾಪಸು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪುರುಷೋತ್ತಮ ರವರು ಮೃತ ಪಟ್ಟಿದ್ದಾರೆ ಎಂದು ದೃಢ ಪಡಿಸಿರುತ್ತಾರೆ.


ಈ ಹಿನ್ನಲೆಯಲ್ಲಿ ಆರೋಪಿ ರಾಜಶೇಖರರ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 279,304(A) ಯಂತೆ ಪ್ರಕರಣ ದಾಖಲಿಸಿ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯಕ್ಕೆ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯ ಇದರ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಯಾದ ಬಿ.ಮೋಹನ್ ಬಾಬು ರವರು ಪ್ರಕರಣವನ್ನು ಸಾಭಿತು ಪಡಿಸಲು ಅಭಿಯೋಜನೆಯು ವಿಫಲ ಗೊಂಡಿದೆ ಎಂದು ಅಭಿಪ್ರಾಯಿಸಿ ಆರೋಪಿಯನ್ನು ನಿರ್ದೋಶಿ ಎಂದು ದಿನಾಂಕ : 30/12/2024 ರಂದು ತೀರ್ಪು ನೀಡಿ ಬಿಡುಗಡೆಗೆ ಆದೇಶಿಸಿದ್ದಾರೆ . ಆರೋಪಿ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ,ಶ್ಯಾಮ್ ಪ್ರಸಾದ್ ಎನ್.ಕೆ ಹಾಗೂ ಸಂಜನ್ ಕೋಲ್ಚಾರ್ ವಾದಿಸಿದ್ದರು.