ವೈಭವದಿಂದ ನಡೆದ ಬ್ರಹ್ಮಕಲಶೋತ್ಸವ ಹಾಗೂ ಮಹಾಕುಂಭಾಭಿಷೇಕ
ಗುತ್ತಿಗಾರು ಗ್ರಾಮದ ಶ್ರೀ ಶೂಲಿನಿ ದುರ್ಗಾದೇವಿ ಮತ್ತು
ಮತ್ತು ವನಶಾಸ್ತಾವು ಕ್ಷೇತ್ರ ಮುತ್ತಾಜೆ – ಚಣಿಲ ಇದು
ನವೀಕರಣಗೊಂಡು, ನೂತನ ಕಟ್ಟೆಗಳಲ್ಲಿ ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶ್ರೀ ವನಶಾಸ್ತಾವು ದೇವರಿಗೆ
ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮಹಾಕುಂಭಾಭಿಷೇಕ ವೈಭವದಿಂದ
ಜ.2 ನಡೆಯಿತು.
ಕುಂಟಾರು ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ನಡೆದಿದ್ದು ಜ.1 ರ ಸಂಜೆಯಿಂದ ವಾಸ್ತುಪೂಜಾದಿ ಹೋಮ ಹವನಗಳು ಸುದರ್ಶನ ಹೋಮ ನಡೆಯಿತು. ಜ.2 ಬೆಳಿಗ್ಗೆ ಗಂಟೆ 8.34 ರಿಂದ 9.34 ರ ತನಕ
ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಮಹಾಕುಂಭಾಭಿಷೇಕ ನಡೆಯಿತು.
ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ನೂರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ ಮುತ್ಲಾಜೆ, ಕಾರ್ಯದರ್ಶಿ ಜಯರಾಮ ಮುತ್ಲಾಜೆ, ಗೌರವಾಧ್ಯಕ್ಷ ತಿರುಮಲೇಶ್ವರ ಭಟ್ ಚಣಿಲ ಹಾಗೂ ಸರ್ವ ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.
ಪೋಟೋ : ಆರ್.ಕೆ ಸ್ಟುಡಿಯೋ ಸುಳ್ಯ