ಬಾಳಿಲ ಕುಟುಂಬಸ್ಥರ ದೈವಗಳ ನೇಮೋತ್ಸವ

0

ಬಾಳಿಲದ ತೋಟದಮೂಲೆಯಲ್ಲಿ ಬಾಳಿಲ ಕುಟುಂಬಸ್ಥರ ತರವಾಡು ದೈವಗಳ ನೇಮೋತ್ಸವ ಡಿ.28 ಮತ್ತು ಡಿ.29 ರಂದು ನಡೆಯಿತು.

ಡಿ.28 ರಂದು ಗಣಹೋಮ, ನಾಗತಂಬಿಲ, ಮುಡಿಪು ಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಮದ್ಯಾಹ್ನ ಅನ್ನಸಂತರ್ಪಣೆ ನಡೆದು ಸಂಜೆ ಭಂಡಾರ ತೆಗೆದು ಕಲ್ಲುರ್ಟಿ ದೈವದ ನೇಮ, ವರ್ಣಾಲ ಪಂರ್ಜುರ್ಲಿ, ಕುಪ್ಪೆ ಪಂರ್ಜುರ್ಲಿ ದೈವದ ನೇಮ ನಡೆದು ಡಿ. 29 ರ ಮುಂಜಾನೆ ಧರ್ಮದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು. ಬಳಿಕ ಗುಳಿಗ ದೈವದ ನೇಮೋತ್ಸವ ನಡೆಯಿತು.