ಕೊಲ್ಲಮೊಗ್ರದಲ್ಲಿ ಗ್ಯಾರಂಟಿ ವಿಲೇವಾರಿ ಶಿಬಿರ

0

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ಯಾರಂಟಿ ವಿಲೇವಾರಿ ಶಿಬಿರ ಜ.2ರಂದು‌ ನಡೆಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ‌ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ರವಿಚಂದ್ರ, ಸಿಡಿಪಿಒ‌ ಶೈಲಜಾ, ಆಹಾರ ಇಲಾಖೆಯ ವಸಂತಿ, ಗ್ಯಾರಂಟಿ ಯೋಜನೆಯ ಕೊಲ್ಲಮೊಗ್ರ ಉಸ್ತುವಾರಿ ಮಣಿಕಂಠ ಕೊಳಗೆ, ಸದಸ್ಯ ಲತೀಫ್ ಅಡ್ಕಾರು ಮೊದಲಾದವರಿದ್ದರು.