ಬಿಳಿನೆಲೆ ಗ್ರಾಮದ ನಿವೃತ್ತ ಪೋಸ್ಟ್ ಮಾಸ್ಟರ್ ಶಿವರಾಮ ಕಳಿಗೆ ಡಿ.31 ರ ತಡರಾತ್ರಿ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಬಾಲಕಿ ಕಳಿಗೆ , ಪುತ್ರ ಚಿದಾನಂದ ಕಳಿಗೆ, ಪುತ್ರಿಯರಾದ ಶ್ರೀಮತಿ ಮಾಲಿನಿ ಲೋಕೇಶ್ ಬಳ್ಳಡ್ಕ, ಶ್ರೀಮತಿ ನವೀನ ದಾಮೋದರ ನಂದಿಲ, ಪುತ್ತೂರು, ಶ್ರೀಮತಿ ತೀರ್ಥಕುಮಾರಿ ಉಮೇಶ್ ಸವಣೂರು, ಶ್ರೀಮತಿ ಜಯಲಕ್ಷ್ಮಿ ಸತೀಶ್ ಕಾರ್ಜ, ಸಹೋದರರು, ಸಹೋದರಿ, ಹಾಗೂ ಬಂಧು ಮಿತ್ರರನ್ನು ಅಗಲಿರುತ್ತಾರೆ.