ಗಿರಿಜಾಶಂಕರ ತುದಿಯಡ್ಕ ತೀವ್ರ ಅಸ್ವಸ್ಥ – ಆಸ್ಪತ್ರೆಗೆ ದಾಖಲು

0

ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದಿ.ತುದಿಯಡ್ಕ ವಿಷ್ಣಯ್ಯ ರವರ ಪುತ್ರ ಹಾಗೂ ಈಗಿನ ಆಡಳಿತ ಮೊಕ್ತೇಸರ
ಡಾ. ಹರಪ್ರಸಾದ್ ತುದಿಯಡ್ಕರವರ ಸಹೋದರ ಗಿರಿಜಾಶಂಕರ ತುದಿಯಡ್ಕರವರು ನಿನ್ನೆ ಸಂಜೆ ತೀವ್ರ ಅಸೌಖ್ಯಕ್ಕೊಳಗಾಗಿ ಪ್ರಜ್ಞಾರಹಿತರಾಗಿದ್ದು ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ.


ದ.29 ರಂದು ಆದಿತ್ಯವಾರದಂದು ಮನೆಯಲ್ಲಿ ಕುಸಿದು ಬಿದ್ದರೆಂದೂ, ವಿಷಯ ತಿಳಿದ ಕೂಡಲೇ
ಮನೆಯವರು ಸುಳ್ಯದಿಂದ ಅಂಬ್ಯುಲೆನ್ಸ್ ತರಿಸಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರೆಂದೂ ತಿಳಿದುಬಂದಿದೆ. ಇದೀಗ ಅವರನ್ನು ತುರ್ತು
ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.