ಡಿ. 31ರಂದು ನಿವೃತ್ತಿ ಹೊಂದಲಿರುವ
ಕಳಂಜ ಬಾಳಿಲ ಪ್ರಾ.ಕೃ.ಪ.ಸ. ಸಂಘದಲ್ಲಿ ಉಪ ಕಾರ್ಯನಿರ್ವಹಣಾಧಿಕಾರಿ ಆನಂದ ಗೌಡ ಕೇನಡ್ಕ ಮತ್ತು ದಿನಗೂಲಿ ನೌಕರರಾಗಿ ನಿವೃತ್ತಿ ಪಡೆದ ಜಯಂತ ಕಾರಾಯರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಡಿ. 30ರಂದು ಸಂಘದ ಪ್ರಧಾನ ಕಚೇರಿ ಕೋಟೆಮುಂಡುಗಾರಿನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಸಂಘದ ಮಾಜಿ ಅಧ್ಯಕ್ಷ ಪಿ.ಜಿ.ಎಸ್.ಎನ್. ಪ್ರಸಾದ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ತರನ್ನು ಸನ್ಮಾನಿಸಿ, ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ಮತ್ತು ಶ್ರೀಮತಿ ಮೀನಾಕ್ಷಿ ಆನಂದ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಉಮೇಶ್ ಪಿ. ಆನಂದ ಗೌಡರ ಸನ್ಮಾನ ಪತ್ರವನ್ನು ವಾಚಿಸಿದರು.
ಸಂಘದ ನಿರ್ದೇಶಕರುಗಳಾದ ಬಿ. ಸುಭಾಶ್ಚಂದ್ರ ರೈ ತೋಟ, ಎನ್. ವಿಶ್ವನಾಥ ರೈ, ಮೇದಪ್ಪ ಗೌಡ, ಸಿಬ್ಬಂದಿ ಉಮೇಶ್ ಪಿ, ಶಿವರಾಮ ಕಜೆಮೂಲೆ, ನಾರಾಯಣ ಶೇಡಿಕಜೆ ನಿವೃತ್ತರಿಗೆ ಶುಭ ಹಾರೈಸಿದರು. ಸಂಘದ ನಿರ್ದೇಶಕ ಅಜಿತ್ ರಾವ್ ಕಿಲಂಗೋಡಿ ಸ್ವಾಗತಿಸಿ, ಬಿ. ಸುಭಾಶ್ಚಂದ್ರ ರೈ ವಂದಿಸಿದರು. ಸಂಘದ ಸಿಬ್ಬಂದಿ ಕು. ಗೀತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರು, ಸಿಬ್ಬಂದಿಗಳು, ಸಂಘದ ಸದಸ್ಯರು, ಆನಂದ ಗೌಡ ಮತ್ತು ಜಯಂತ ಕಾಯಾರರವರ ಕುಟುಂಬಸ್ಥರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಘದ ಆಡಳಿತ ಮಂಡಳಿ, ಸಿಬ್ಬಂದಿಳು, ಕಳಂಜ ಯುವಕಮಂಡಲ ಮತ್ತು ಹಲವು ಸದಸ್ಯರು ನಿವೃತ್ತರನ್ನು ಸನ್ಮಾನಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.