ಗುತ್ತಿಗಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ‘ಆನಂದ ಸ್ವರೂಪಿ ಅಯ್ಯಪ್ಪನೇ’ ಕನ್ನಡ ಭಕ್ತಿಗೀತೆ ಬಿಡುಗಡೆ

0

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿಗೀತೆ ‘ಆನಂದ ಸ್ವರೂಪಿ ಅಯ್ಯಪ್ಪನೇ’ ಗುತ್ತಿಗಾರಿನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಬಿಡುಗಡೆಗೊಂಡಿತು. ಶ್ರೀ ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ಇವರು ಹಮ್ಮಿಕೊಂಡಿದ್ದ ಸಾಮೂಹಿಕ ಶನೇಶ್ವರ ಪೂಜೆ ಮತ್ತು ಭಜನಾ ಕಾರ್ಯಕ್ರಮದಲ್ಲಿ ಹಿರಿಯರಾದ ಬಿ ಕೆ ಬೆಳ್ಳಿಯಪ್ಪ ಗೌಡ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದಯಾನಂದ ಕನ್ನಡಕ್ಕ, ಅಚ್ಚುತ ಗುತ್ತಿಗಾರು, ಗುರು ಸ್ವಾಮಿಗಳಾದ ಸುರೇಶ್ ಕಂದ್ರಪಾಡಿ, ಮೋಹನ್ ಕಡತಲಕಜೆ, ಸಾಹಿತ್ಯ ರಚಿಸಿದ ನಿರಂಜನ್ ಕಡ್ಲಾರು ಹಾಗೂ ಯುವ ಗಾಯಕಿ ಅಂಕಿತಾ ಆಚಾರ್ಯ ಕಡ್ಲಾರು ಉಪಸ್ಥಿತರಿದ್ದರು.
ಈ ಭಕ್ತಿಗೀತೆಗೆ ನಿರಂಜನ್ ಕಡ್ಲಾರುರವರ ಸಾಹಿತ್ಯವಿದ್ದು, ಶ್ರೀರಾಮ್ ಮುಳ್ಯ ಮತ್ತು ಭಾಸ್ಕರ್ ಅಡೂರು ರವರ ಗಾಯನವಿದೆ. ಶರತ್ ಬಿಳಿನೆಲೆಯವರ ಸಂಗೀತವಿದ್ದು. ಮೋಹಿತ್ ಧರ್ಮಸ್ಥಳ ಇವರ ಸಂಕಲನವಿದೆ.