ದೊಡ್ಡೇರಿ ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಾನಂತ ಶರಳಾಯರಿಂದ ಸಹಾಯಧನ

0

ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ದೊಡ್ಡೇರಿ ಶಾಲಾ‌ ಮುಖ್ಯ ಶಿಕ್ಷಕ ಕೃಷ್ಣಾನಂತ ಶರಳಾಯರು, ಮರದಿಂದ ಬಿದ್ದು ಶಕ್ತಿ ಕಳೆದುಕೊಂಡಿರುವ ರವಿಪ್ರಸಾದ್ ಕೇರ್ಪಳ – ಕುರುಂಜಿಗುಡ್ಡೆ ಇವರ ಚಿಕಿತ್ಸೆಗೆ ರೂ.10 ಸಾವಿರ ಸಹಾಯಧನ ಹಸ್ತಾಂತರ ಮಾಡಿದರು.

ಡಿ.31ರಂದು ರವಿಪ್ರಸಾದ ಮನೆಗೆ ಭೇಟಿ ನೀಡಿದ ಕೃಷ್ಣಾನಂತರು ದೊಡ್ಡೇರಿ ಶಾಲೆಯಲ್ಲಿ ಕೊಳವೆಬಾವಿ ತೋಡಿ ಒಂದು ವರ್ಷವಾದ ನೆನಪಿಗೆ ಈ ಸಹಾಯಧನ ನೀಡುತ್ತಿದ್ದೇನೆ ಎಂದು ಹೇಳಿದರು.

ರವಿಪ್ರಸಾದರ ತಾಯಿ ರತ್ನಾವತಿ, ಮನೋಜ್ ಕೇರ್ಪಳ, ಸುದ್ದಿ ಬಿಡುಗಡೆ ಪತ್ರಿಕೆ ಮುಖ್ಯ ವರದಿಗಾರ ಶಿವಪ್ರಸಾದ್ ಕೇರ್ಪಳ ಈ ಸಂದರ್ಭದಲ್ಲಿ ಇದ್ದರು.