ಮುಕ್ಕೂರು – ಪೆರುವಾಜೆ ಮೊಗೇರ ಗ್ರಾಮ ಸಮಿತಿ ಪದಾಧಿಕಾರಿಗಳ ಆಯ್ಕೆ

0

ಮೊಗೇರ ಗ್ರಾಮ ಸಮಿತಿ ಮುಕ್ಕೂರು ಪೆರುವಾಜೆ ಇದರ 2025-2028, ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಡಿ.30 ರಂದು ಸಮಿತಿಯ ಅಧ್ಯಕ್ಷ ರಮೇಶ್ ಕಾನಾವು ಇವರ ನಿವಾಸದಲ್ಲಿ ನಡೆಯಿತು.


ಸಮಿತಿಯ ನೂತನ ಅಧ್ಯಕ್ಷರಾಗಿ ಶೀನಪ್ಪ ಅನವುಗುಂಡಿ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ರವಿ ಕಾನಾವು ಕುವೆತಡ್ಕ ಇವರನ್ನು, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಅನವುಗುಂಡಿ, ಜತೆ ಕಾರ್ಯದರ್ಶಿಯಾಗಿ ಸವಿತಾ ಮುಂಡಾಜೆ, ಕೋಶಾಧಿಕಾರಿಯಾಗಿ ರಾಮಚಂದ್ರ ಚೆನ್ನಾವರ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಪುರುಷೋತ್ತಮ ಕುಂಡಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.


ಅದೇ ರೀತಿ ಸಮಿತಿಯ ಗೌರವಾಧ್ಯಕ್ಷರಾಗಿ ಹಿಂದಿನ ಅಧ್ಯಕ್ಷ ರಮೇಶ್ ಕಾನಾವು ಕುವೆತಡ್ಕ ಇವರಿಗೆ ಜವಾಬ್ದಾರಿ ವಹಿಸಿಕೊಡಲಾಗಿದ್ದು, ಸಮಿತಿಯ ಹಿರಿಯ ಸದಸ್ಯರುಗಳಾದ ಪೂವಪ್ಪ ಅನವುಗುಂಡಿ ಮತ್ತು ಮುದರು ಕುಂಡಡ್ಕ ಇವರುಗಳನ್ನು ಸಮಿತಿಯ ಗೌರವ ಸಲಹೆಗಾರರನ್ನಾಗಿ ಮುಂದುವರೆಸಲಾಯಿತು.
ಹಾಗೂ ತಿಮ್ಮಪ್ಪ ಚೆನ್ನಾವರ, ಬಾಬು ಕಾನಾವು ಕುವೆತಡ್ಕ, ರಮೇಶ್ ಅನವುಗುಂಡಿ, ಭಟ್ಯಪ್ಪ ಬೊಮ್ಮಂತಗುಂಡಿ, ಸುಂದರ ಅನವುಗುಂಡಿ, ಪ್ರವೀಣ್ ಬೋಳಕುಮೇರು ಮತ್ತು ಲೋಹಿತಾಕ್ಷಿ ಚೆನ್ನಾವರ ಇವರುಗಳು ಸಮಿತಿಯ ಸದಸ್ಯರುಗಳಾಗಿ ಮುಂದುವರಿಸಲಾಯಿತು.