ಶ್ರೀಮತಿ ಜಾನಕಿ ಕೆಳಗಿನ ಮನೆ ಹಾಗೂ ಅವರ ಪುತ್ರಿ ಶ್ರೀಮತಿ ಚಂದ್ರಿಕಾ ನರ್ಸಿಂಗ್ ಆಫೀಸರ್ ಗವರ್ನಮೆಂಟ್ ಜನರಲ್ ಹಾಸ್ಪಿಟಲ್ ಪುತ್ತೂರು ಇವರು ಡಿ.31 ರಂದು ಸ. ಉ.ಹಿ.ಪ್ರಾ. ಶಾಲೆ ಸೋಣಂಗೇರಿ ಇಲ್ಲಿಗೆ ಸುಮಾರು ರೂಪಾಯಿ ಮೂವತ್ತೈದು ಸಾವಿರ ಮೌಲ್ಯದ ಸೂಟ್ ಮತ್ತು ರೂಪಾಯಿ 12000 ಮೌಲ್ಯದ ತಟ್ಟೆ ಹಾಗೂ ಲೋಟಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಶ್ರೀಮತಿ ಜಾನಕಿ ಹಾಗೂ ಶ್ರೀಮತಿ ಚಂದ್ರಿಕಾ ಎಸ್ ಕೆ ಇವರನ್ನು ಎಸ್.ಡಿ.ಎಂ.ಸಿ.ಹಾಗೂ ಶಾಲೆಯ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ .ಎಂ.ಸಿ. ಅಧ್ಯಕ್ಷರು ಶ್ರೀ ಚಿದಾನಂದ ,ಗ್ರಾಮ ಪಂಚಾಯತಿ ಜಾಲ್ಸೂರು ಇಲ್ಲಿನ ಸದಸ್ಯರು ಶ್ರೀ ಈಶ್ವರ ನಾಯ್ಕ, ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮಾವತಿ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸ್ವಾಗತಿಸಿ, ಶ್ರೀಮತಿ ಸವಿತ ಎನ್.ಪಿ. ವಂದಿಸಿದರು ಮತ್ತು ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.