ನವೀನ್ ಚಾತುಬಾಯಿಯವರಿಗೆ ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯಿಂದ ಗೌರವ ಪುರಸ್ಕಾರ

0

ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕೃಷಿಕ ಸಿ. ಕೆ. ನವೀನ್ ಚಾತುಬಾಯಿಯವರಿಗೆ ಬಂಟ್ವಾಳ ತಾಲೂಕಿನ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆ ವತಿಯಿಂದ ಗೌರವ ಪುರಸ್ಕಾರ ಮಾಡಲಾಯಿತು.

ಡಿ.30ರಂದು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ನಡೆದ “ಸಾಯಿ ಪ್ರತಿಭಾ”2024-25 ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಮಾಡಲಾಯಿತು.

ಅಳಿಕೆಯ ಹಳೆ ವಿದ್ಯಾರ್ಥಿಗಳಾಗಿದ್ದ ಸಾಧಕರಿಗೆ ಈ ಸನ್ಮಾನ ಗೌರವವನ್ನು ಮಾಡಲಾಯಿತು.

ಸನ್ಮಾನ ಕಾರ್ಯಕ್ರಮವನ್ನು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಅಳಿಕೆಯ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯ ಸಂಚಾಲಕ ಚಂದ್ರಶೇಖರ್ ಭಟ್, ವಾರ್ಡನ್ ಉದನೇಶ್ವರ ಭಟ್, ಶಾಲಾ ಮುಖ್ಯೋಪಾಧ್ಯಾಯ ರಘು ಹಾಗೂ ಮಂಗಳೂರಿನ ವೈದ್ಯ ಡಾ. ಜಯಪ್ರಕಾಶ್ ಉಪಸ್ಥಿತರಿದ್ದರು.